ಕಾಶ್ಮೀರದಲ್ಲಿ ವಿಧಾನಸಭೆ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ: ಮಸೂದೆಗೆ ಲೋಕಸಭೆ ಅಂಗೀಕಾರ

ಜಮ್ಮು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ- 2023 ಮತ್ತು 2023ರ ಜಮ್ಮು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಜುಲೈ 26ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ಸಂಸತ್ತು
ಸಂಸತ್ತು
Published on

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ- 2023 ಮತ್ತು 2023ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿತು.

ಸಂಸತ್ತಿನ ಕೆಳಮನೆಯಲ್ಲಿ ಜುಲೈ 26ರಂದು ಮಂಡಿಸಲಾದ ಈ ಎರಡು ಮಸೂದೆಗಳು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ, ಉದ್ಯೋಗ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಲಿವೆ.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆ, 2004ನ್ನು ಬದಲಿಸಲಿರುವ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ- 2023 'ದುರ್ಬಲ ಮತ್ತು ಕಡಿಮೆ ಸವಲತ್ತು ಪಡೆದ ವರ್ಗಗಳು' ಎನ್ನುವುದರ ಜಾಗದಲ್ಲಿ 'ಕಾಲಕಾಲಕ್ಕೆ ಸರ್ಕಾರದಿಂದ ನಿರ್ಧರಿಸಲ್ಪಟ್ಟ ಇತರ ಹಿಂದುಳಿದ ವರ್ಗಗಳೊಂದಿಗೆ' ಎನ್ನುವುದರಿಂದ ಬದಲಾಯಿಸಲು ಅವಕಾಶ ಮಾಡಿಕೊಡುತ್ತದೆ ಜೊತೆಗೆ ದುರ್ಬಲ ಮತ್ತು ಕಡಿಮೆ ಸವಲತ್ತು ಪಡೆದ ವರ್ಗಗಳ ವ್ಯಾಖ್ಯಾನವನ್ನು ತೆಗೆದುಹಾಕುತ್ತದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019ನ್ನು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ- 2023 ಬದಲಿಸಲಿದೆ. ಹೊಸ ಮಸೂದೆ ಪ್ರಕಾರ ವಿಧಾನಸಭೆ ಒಟ್ಟು ಸ್ಥಾನಗಳ ಸಂಖ್ಯೆಯನ್ನು 90 ಕ್ಕೆ ಹೆಚ್ಚಿಸಲಿದ್ದು ಪರಿಶಿಷ್ಟ ಜಾತಿಗಳಿಗೆ 7 ಸ್ಥಾನ ಮತ್ತು ಪರಿಶಿಷ್ಟ ಪಂಗಡಗಳಿಗೆ 9 ಸ್ಥಾನ ಮೀಸಲಿಡಲಿದೆ.

ಇದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಾಶ್ಮೀರಿ ವಲಸಿಗ ಸಮುದಾಯದಿಂದ ಇಬ್ಬರು ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅನುವು ಮಾಡಿಕೊಡುತ್ತದೆ. ಇವರಲ್ಲಿ ಒಬ್ಬರು ಮಹಿಳೆಯಾಗಿರಬೇಕು.

ಪ್ರಸ್ತಾವಿತ ಕಾಯಿದೆ ಪ್ರಕಾರ, ವಲಸಿಗರನ್ನು ನವೆಂಬರ್ 1, 1989 ರ ನಂತರ ಕಾಶ್ಮೀರ ಕಣಿವೆ ಅಥವಾ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಯಾವುದೇ ಭಾಗದಿಂದ ವಲಸೆ ಬಂದ ಮತ್ತು ಪರಿಹಾರ ಆಯುಕ್ತರಲ್ಲಿ ನೋಂದಾಯಿಸಿದ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗಿದೆ.  

ಅಲ್ಲದೆ 1947-48, 1965 ಅಥವಾ 1971ರಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪ್ರತಿನಿಧಿಸುವ ಒಬ್ಬ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಈ ಮಸೂದೆ ಲೆ. ಗವರ್ನರ್‌ಗೆ ಅನುವು ಮಾಡಿಕೊಡುತ್ತದೆ.

ಅಮಿತ್ ಶಾ
ಅಮಿತ್ ಶಾ

ಸಂಸತ್ತನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಹೆಚ್ಚಿನ ಸಂಸದರು ಮಸೂದೆಗಳಿಗೆ ಅವಿರೋಧವಾಗಿ ಮತ ಚಲಾಯಿಸಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಈ ಮಸೂದೆ ಕಳೆದ 70 ವರ್ಷಗಳಲ್ಲಿ ತುಳಿತಕ್ಕೊಳಗಾದವರಿಗಾಗಿ ರೂಪಿಸಲಾಗಿದೆ. ಇದು ಅವರಿಗೆ ನ್ಯಾಯ ಮತ್ತು ಹಕ್ಕುಗಳನ್ನು ಒದಗಿಸುತ್ತದೆ" ಎಂದು ಶಾ ಹೇಳಿದರು.

Kannada Bar & Bench
kannada.barandbench.com