
ಬುದ್ಧ ಪೂರ್ಣಿಮೆಯನ್ನು ಸರ್ಕಾರಿ ರಜಾ ದಿನವನ್ನಾಗಿ ಘೋಷಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.
ಎಂ ಸಿ ಪಂಡೈರಾಜ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತು ನ್ಯಾ. ಡಿ ಭರತ ಚಕ್ರವರ್ತಿ ನೇತೃತ್ವದ ವಿಭಾಗೀಯ ಪೀಠವು ಲಘು ದಾಟಿಯಲ್ಲಿ ಇಂಥ ಕೋರಿಕೆಯನ್ನು ಬುದ್ಧನೇ ಒಪ್ಪುತ್ತಿರಲಿಲ್ಲವೇನೋ ಎಂದಿತು.
“ಬುದ್ದನೇ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿರಲಿಲ್ಲವೇನೋ. ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠವು ಮನವಿ ತಿರಸ್ಕರಿಸಿತು.