ಡಾ. ಶಮ್ನಾದ್‌ ಬಷೀರ್ ವಿದ್ಯಾರ್ಥಿವೇತನ ಪಡೆಯಲು ಪ್ರಬಂಧ ಸ್ಪರ್ಧೆ ಆಯೋಜನೆ; ಜೂನ್‌ 15ರವರೆಗೆ ಕಾಲಾವಕಾಶ

ಎಲ್‌ಎಸ್‌ಎಟಿ-ಇಂಡಿಯಾ ಪರೀಕ್ಷೆ ಬರೆಯುವವರ ಪ್ರಬಂಧ ಸ್ಪರ್ಧೆಯಲ್ಲಿನ ಪ್ರದರ್ಶನ ಆಧರಿಸಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಡಾ. ಶಮ್ನಾದ್‌ ಬಷೀರ್ ವಿದ್ಯಾರ್ಥಿವೇತನ ಪಡೆಯಲು ಪ್ರಬಂಧ ಸ್ಪರ್ಧೆ ಆಯೋಜನೆ; ಜೂನ್‌ 15ರವರೆಗೆ ಕಾಲಾವಕಾಶ
Prof Shamnad Basheer

ಭಾರತದಲ್ಲಿ ಕಾನೂನು ಶಿಕ್ಷಣದ ಪರಿಧಿಯನ್ನು ವಿಸ್ತರಿಸುವ ಉದ್ದೇಶದಿಂದ ಕಾನೂನು ಶಾಲಾ ಪ್ರವೇಶಾತಿ ಮಂಡಳಿ - ಜಾಗತಿಕ (ಎಲ್‌ಎಸ್‌ಎಸಿ ಗ್ಲೋಬಲ್)‌ ಮಾರ್ಚ್‌ ಮತ್ತು ಜೂನ್‌ನಲ್ಲಿ ನಡೆಯಲಿರುವ ಎಲ್‌ಎಸ್‌ಎಟಿ-ಇಂಡಿಯಾ 2021 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೆರಿಟ್‌ ವಿದ್ಯಾರ್ಥಿವೇತನ ಘೋಷಿಸಿದೆ.

ಎಲ್‌ಎಸ್‌ಎಟಿ-ಭಾರತ ಪರೀಕ್ಷೆ ಬರೆಯುವವರ ಪ್ರಬಂಧ ಸ್ಪರ್ಧೆಯಲ್ಲಿನ ಪ್ರದರ್ಶನ ಆಧರಿಸಿ ಶಮ್ನಾದ್‌ ಬಷೀರ್‌ ನ್ಯಾಯದಾನ ವಿದ್ಯಾರ್ಥಿವೇತನ ಕಲ್ಪಿಸಲಾಗುತ್ತದೆ. “ಕಾನೂನು ವೃತ್ತಿಯಲ್ಲಿ ಕೃತಕ ಬುದ್ದಿಮತ್ತೆ ಪರಿಚಯಿಸುವುದರಿಂದ ಪಕ್ಷಪಾತ ತಗ್ಗಿಸುವುದು, ನ್ಯಾಯದಾನ ಪಡೆಯುವ ಅವಕಾಶ ಹೆಚ್ಚಳ ಮತ್ತು ಸಮಾಜದಲ್ಲಿ ವಿಭಿನ್ನತೆಗೆ ಮಹತ್ವ” ಎಂಬ ವಿಷಯವನ್ನು ಪ್ರಸಕ್ತ ವರ್ಷ ನೀಡಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಪರ ಅಥವಾ ವಿರೋಧವಾಗಿ ಪ್ರಬಂಧ ಬರೆದು ಜೂನ್‌ 15ರ ಒಳಗೆ ತಮ್ಮ ಪ್ರವೇಶ ಖಾತರಿಪಡಿಸಬೇಕು. ಪ್ರತಿಯೊಂದು ಪ್ರಬಂಧವನ್ನುಅದರ ಸ್ವಂತಿಕೆ, ವಿಷಯ ಪ್ರಸ್ತುತಿ, ಸಮಗ್ರತೆ, ರಚನೆ, ವಿಶ್ಲೇಷಣೆ, ತಿಳಿವಳಿಕೆ, ವ್ಯಾಖ್ಯಾನ ಮತ್ತು ಕಾನೂನು ವೃತ್ತಿಯಲ್ಲಿನ ವೈವಿಧ್ಯತೆಗೆ ಸಂಬಂಧಿಸಿದ ತೀರ್ಮಾನಗಳ ಮೇಲೆ ನಿರ್ಧರಿಸಲಾಗುತ್ತದೆ.

ವಿದ್ಯಾರ್ಥಿವೇತನ ವಿಜೇತರಿಗೆ 4 ಲಕ್ಷ ರೂಪಾಯಿ ದೊರೆಯಲಿದ್ದು, ಯಾವುದೇ ಪ್ರದೇಶದಲ್ಲಿರುವ ಎಲ್‌ಎಸ್‌ಎಸಿ ಗ್ಲೋಬಲ್‌ ಕಾನೂನು ಅಲಯನ್ಸ್‌ ಕಾಲೇಜಿನಲ್ಲಿ ಮೊದಲನೇ ವರ್ಷದಿಂದ ಐದನೇ ವರ್ಷದ ಕಾನೂನು ಪದವಿಯವರೆಗಿನ ಬೋಧನೆ ಮತ್ತು ಹಾಸ್ಟೆಲ್‌ ಶುಲ್ಕವನ್ನು ಒಳಗೊಳ್ಳಲಿದೆ. ಮೊದಲ ವರ್ಷದಲ್ಲಿ ಆ ಹಣವನ್ನು ಬಳಕೆ ಮಾಡಿಕೊಳ್ಳದೇ ಇದ್ದರೆ ಅದನ್ನು ಎರಡನೇ ವರ್ಷಕ್ಕೆ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಮತ್ತು ವಿದ್ಯಾರ್ಥಿವೇತನದ ಕುರಿತಾದ ಷರತ್ತುಗಳ ಬಗ್ಗೆ ತಿಳಿದುಕೊಳ್ಳಲು ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಪ್ರೊಫೆಸರ್‌ ಡಾ. ಶಮ್ನಾದ್‌ ಬಷೀರ್‌ ಅವರ ಸ್ಮರಣಾರ್ಥವಾಗಿ ಎಲ್‌ಎಸ್‌ಎಸಿ ಗ್ಲೋಬಲ್‌ ಕಳೆದ ವರ್ಷ ವಿದ್ಯಾರ್ಥಿವೇತನ ನೀಡಲು ನಿರ್ಧಾರ ಕೈಗೊಂಡಿತು

Also Read
ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ವಿದ್ಯಾರ್ಥಿಗಳ ಅಂತಿಮ ಸೆಮಿಸ್ಟರ್‌ ಪರೀಕ್ಷೆ ಮುಂದೂಡಿಕೆ: ಕೆಎಸ್‌ಎಲ್‌ಯು

“ಸದರಿ ವಿದ್ಯಾರ್ಥಿ ವೇತನಗಳ ಮೂಲಕ ಎಲ್ಎಸ್ಎಸಿ ಗ್ಲೋಬಲ್ (ಎಲ್ಎಸ್ಎಜಿ) ಭಾರತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕಾನೂನು ಶಾಲೆಯ ಆಕಾಂಕ್ಷಿಗಳಿಗೆ ಬಾಗಿಲು ತೆರೆಯಲು ಮತ್ತು ಹೆಚ್ಚಿನ ಅವಕಾಶಗಳನ್ನು ಒದಗಿಸಲು ಎದುರು ನೋಡುತ್ತಿದೆ. ಹೀಗಾಗಿ ಕಾನೂನು ಶಿಕ್ಷಣದಲ್ಲಿ ವೈವಿಧ್ಯತೆ, ಪ್ರವೇಶ ಮತ್ತು ಸಮಾನತೆಯನ್ನು ಉತ್ತೇಜಿಸುವ ಧ್ಯೇಯವನ್ನು ಮುಂದುವರಿಸಿದ್ದೇವೆ” ಎಂದು ಎಲ್‌ಎಸ್‌ಎಸಿ ಉಪಾಧ್ಯಕ್ಷ ಯೂಸುಫ್‌ ಅಬ್ದುಲ್‌ ಕರೀಂ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಎಲ್‌ಎಸ್‌ಎಟಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಎಲ್‌ಎಸ್‌ಎಸಿ ಅಗ್ರಶ್ರೇಯಾಂಕಿತ (ಟಾಪರ್‌) ವಿದ್ಯಾರ್ಥಿವೇತನವನ್ನೂ ನೀಡುತ್ತಿದೆ.

No stories found.
Kannada Bar & Bench
kannada.barandbench.com