ಬೇಸಿಗೆ ಬಿಸಿಲು: ಕಪ್ಪು ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಿದ ಮದ್ರಾಸ್ ಹೈಕೋರ್ಟ್ [ಚುಟುಕು]

ಹೈಕೋರ್ಟ್ ವಕೀಲರ ಸಂಘದ ಪದಾಧಿಕಾರಿಗಳು ಮಾಡಿದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಬೇಸಿಗೆ ಬಿಸಿಲು: ಕಪ್ಪು ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಿದ ಮದ್ರಾಸ್ ಹೈಕೋರ್ಟ್ [ಚುಟುಕು]
A1

ಈ ವರ್ಷ ಬೇಸಿಗೆ ರಜೆ ವೇಳೆ ನ್ಯಾಯಾಲಯಕ್ಕೆ ಹಾಜರಾಗುವ ವಕೀಲರಿಗೆ ಕಪ್ಪು ಗೌನ್ ಧರಿಸುವುದರಿಂದ ಮದ್ರಾಸ್ ಹೈಕೋರ್ಟ್ ವಿನಾಯಿತಿ ನೀಡಿದೆ.

ಮದ್ರಾಸ್ ವಕೀಲರ ಸಂಘದ ಪದಾಧಿಕಾರಿಗಳು ಮಾಡಿದ ಮನವಿ ಹಿನ್ನೆಲೆಯಲ್ಲಿ ಗುರುವಾರ ಈ ಅಧಿಸೂಚನೆ ಹೊರಡಿಸಲಾಗಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ವಿನಾಯಿತಿಗೆ ಸಮ್ಮತಿ ಸೂಚಿಸಿರುವುದನ್ನು ಅಧಿಸೂಚನೆ ವಿವರಿಸಿದೆ.

ಆದರೆ, ವಕೀಲರು ಹಾಜರಾಗುವಾಗ ಕಾಲರ್ ಬ್ಯಾಂಡ್ ಮತ್ತು ಕಪ್ಪು ಕೋಟ್ ಧರಿಸಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

Kannada Bar & Bench
kannada.barandbench.com