ಎಐಎಡಿಎಂಕೆ ಧ್ವಜ, ಚಿಹ್ನೆ ಬಳಕೆ: ಒಪಿಎಸ್‌ಗೆ ವಿಧಿಸಿದ್ದ ನಿರ್ಬಂಧ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಒಪಿಎಸ್ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದ ಏಕ ಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದ ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರು ಮನವಿ ವಜಾಗೊಳಿಸಿದರು.
ಒ ಪನ್ನೀರ್ ಸೆಲ್ವಂ ಮತ್ತು ಮದ್ರಾಸ್ ಹೈಕೋರ್ಟ್
ಒ ಪನ್ನೀರ್ ಸೆಲ್ವಂ ಮತ್ತು ಮದ್ರಾಸ್ ಹೈಕೋರ್ಟ್ಒ ಪನ್ನೀರ್ ಸೆಲ್ವಂ (ಫೇಸ್ ಬುಕ್)

ತಾನು ಎಐಎಡಿಎಂಕೆ ಸಂಘಟಕ ಅಥವಾ ಪ್ರಾಥಮಿಕ ಸದಸ್ಯ ಎಂದು ಹೇಳಿಕೊಳ್ಳುವುದನ್ನು ಮತ್ತು ಪಕ್ಷದ ಅಧಿಕೃತ ಲೆಟರ್ ಹೆಡ್, ಚಿಹ್ನೆ ಹಾಗೂ ಧ್ವಜ ಬಳಸುವುದನ್ನು ನಿರ್ಬಂಧಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಐಎಡಿಎಂಕೆ ಉಚ್ಚಾಟಿತ ನಾಯಕ ಒ ಪನ್ನೀರ್ ಸೆಲ್ವಂ (ಒಪಿಎಸ್) ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಏಕ ಸದಸ್ಯ ಪೀಠ ನವೆಂಬರ್ 2023ರಲ್ಲಿ ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದ ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಮತ್ತು ಮೊಹಮ್ಮದ್ ಶಫೀಕ್ ಮನವಿ ವಜಾಗೊಳಿಸಿದರು.

ಪಕ್ಷದ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಮತ್ತು ಒಪಿಎಸ್ ಅವರ ರಾಜಕೀಯ ಎದುರಾಳಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು (ಇಪಿಎಸ್) ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಕಳೆದ ವರ್ಷ ನವೆಂಬರ್ 7ರಂದು ತೀರ್ಪು ನೀಡಿತ್ತು. ಎಐಎಡಿಎಂಕೆಯ ಧ್ವಜ ಅಥವಾ ಚಿಹ್ನೆ ಬಳಸದಂತೆ ಒಪಿಎಸ್‌ ಅವರಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರು.

ಒಪಿಎಸ್ ಅವರು ಎಐಎಡಿಎಂಕೆಯ ಸಂಘಟಕ ಮತ್ತು ಪ್ರಾಥಮಿಕ ಸದಸ್ಯ ಎಂದು ಹೇಳಿಕೊಳ್ಳದಂತೆ ತಡೆಯಬೇಕು ಎಂದು ಕೋರಿ ಇಪಿಎಸ್ ನ್ಯಾಯಾಲಯದ ಮೊರೆ ಹೋಗಿದ್ದರು.

ನವೆಂಬರ್ 7ರ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com