ತಮಿಳುನಾಡು ಸಚಿವ ಕೆ ಪೊನ್ಮುಡಿ, ಮದ್ರಾಸ್ ಹೈಕೋರ್ಟ್
ತಮಿಳುನಾಡು ಸಚಿವ ಕೆ ಪೊನ್ಮುಡಿ, ಮದ್ರಾಸ್ ಹೈಕೋರ್ಟ್

ಭ್ರಷ್ಟಾಚಾರ: ತಮಿಳುನಾಡು ಸಚಿವ ಪೊನ್ಮುಡಿ ದಂಪತಿಗೆ 3 ವರ್ಷ ಸೆರೆ, ₹ 50 ಲಕ್ಷ ದಂಡ ವಿಧಿಸಿದ ಮದ್ರಾಸ್‌ ಹೈಕೋರ್ಟ್‌

ಶಿಕ್ಷೆ ಪ್ರಕಟವಾದ ಬುಧವಾರ ನ್ಯಾಯಾಲಯದಲ್ಲಿ ಹಾಜರಿದ್ದ ಪೊನ್ಮುಡಿ ಮತ್ತು ಅವರ ಪತ್ನಿ ತಮಗೆ ವಯಸ್ಸಾಗಿದ್ದು ಇದು ಹಳೆಯ ಪ್ರಕರಣವಾಗಿರುವುದರಿಂದ ಕೊಂಚ ದಯೆ ತೋರುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮತ್ತವರ ಪತ್ನಿ ವಿಶಾಲಾತ್ಚಿ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಇವರಿಬ್ಬರನ್ನು ತಪ್ಪಿತಸ್ಥರೆಂದು ಡಿಸೆಂಬರ್ 19ರಂದು ಘೋಷಿಸಿದ್ದ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಜೊತೆಗೆ ದಂಪತಿಗೆ ₹ 50 ಲಕ್ಷ ದಂಡ ಪಾವತಿಸುವಂತೆಯೂ ಆದೇಶಿಸಲಾಯಿತು.

ಭ್ರಷ್ಟಾಚಾರ ಪ್ರಕರಣದಲ್ಲಿ ದಂಪತಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಕೆಲ ದಿನಗಳ ಹಿಂದೆ ರದ್ದುಗೊಳಿಸಿದ್ದ ನ್ಯಾ. ಜಯಚಂದ್ರನ್, ಶಿಕ್ಷೆ ವಿಧಿಸುವ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದರು.

ಶಿಕ್ಷೆ ಪ್ರಕಟವಾದ ಬುಧವಾರ ನ್ಯಾಯಾಲಯದಲ್ಲಿ ಹಾಜರಿದ್ದ ಪೊನ್ಮುಡಿ ಮತ್ತು ಅವರ ಪತ್ನಿ ತಮಗೆ ವಯಸ್ಸಾಗಿದ್ದು ಇದು ಹಳೆಯ ಪ್ರಕರಣವಾಗಿರುವುದರಿಂದ ಕೊಂಚ ದಯೆ ತೋರುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಭ್ರಷ್ಟಾಚಾರ ತಡೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ ಸುಂದರಮೂರ್ತಿ ಅವರು ಏಪ್ರಿಲ್ 2016ರಲ್ಲಿ, ಪೊನ್ಮುಡಿ ಮತ್ತು ವಿಶಾಲಾಚಿ ಅವರನ್ನು ಖುಲಾಸೆಗೊಳಿಸಿದ್ದರು. ದಂಪತಿಯ ಆದಾಯಕ್ಕಿಂತ ಹೆಚ್ಚುವರಿಯಾಗಿ ₹ 1.75 ಕೋಟಿ ಆಸ್ತಿ ಸಂಪಾದಿಸಿದೆ ಎಂದು ಪ್ರಾಸಿಕ್ಯೂಷನ್‌ ಹೇಳಿಕೊಂಡಿದ್ದರೂ ಅದನ್ನು ಸಾಬೀತುಪಡಿಸಲು ಅದು ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳು ನುಡಿದಿದ್ದರು.

ಈ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ವಕೀಲರು ಮೇಲ್ಮನವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಕಳೆದ ಜೂನ್‌ನಲ್ಲಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ದಂಪತಿಯ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಪೊನ್ಮುಡಿ ಮತ್ತು ಅವರ ಪತ್ನಿ ಕೂಡ ಪಕ್ಷಕಾರರಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com