ಸಂತ್ರಸ್ತರ ಪತ್ನಿ ದೂರು ದಾಖಲಿಸಿದ್ದಾರೆ ಎಂಬ ಕಾರಣಕ್ಕೆ ಮ್ಯಾಜಿಸ್ಟ್ರೇಟ್ ಅದನ್ನು ಹಿಂದಿರುಗಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಯಾವುದೇ ವ್ಯಕ್ತಿ ಕ್ರಿಮಿನಲ್ ಕಾನೂನನ್ನು ಬಳಸಬಹುದು ಎಂಬುದು ಕಾನೂನಿನಲ್ಲಿ ಅಸ್ತಿತ್ವದಲ್ಲಿರುವ ಪ್ರತಿಪಾದನೆಯಾಗಿದೆ ಎಂದು ನ್ಯಾಯಮೂರ್ತಿ ಕೆ ಹರಿಪಾಲ್ ತಿಳಿಸಿದರು.
ಸಿಬ್ಬಂದಿ ಹಾಕಿದ ಕಚೇರಿ ಟಿಪ್ಪಣಿಗಳನ್ನು ಆಧರಿಸಿ ಮ್ಯಾಜಿಸ್ಟ್ರೇಟ್ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡ ನ್ಯಾಯಾಲಯ ಇದೇ ವೇಳೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಆರೋಪಿ ಚಲಾಯಿಸುತ್ತಿದ್ದ ಮೋಟರ್ ಸೈಕಲ್‌ನಲ್ಲಿ ವೃತ್ತಿಯಿಂದ ಬಡಗಿಯಾಗಿದ್ದ ಅರ್ಜಿದಾರರ ಪತಿ, ಹಿಂಬದಿ ಸವಾರರಾಗಿ ಕೆಲಸಕ್ಕೆ ಹೋಗುತ್ತಿದ್ದಾಗ ಗಾಯಗೊಂಡಿದ್ದರು. ಈ ಸಂಬಂಧ ಪರಿಹಾರ ಕೋರಿ ಬಡಗಿಯ ಪತ್ನಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ದೂರನ್ನು ಜೆಎಂಎಫ್‌ಸಿ ನ್ಯಾಯಾಲಯ ಹಿಂತಿರುಗಿಸಿತ್ತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.