ಮಹಾರಾಷ್ಟ್ರ ಬಿಕ್ಕಟ್ಟು: ಬಂಡಾಯ ಶಾಸಕರ ಅಮಾನತು ಕೋರಿ ಸುಪ್ರೀಂ ಕದತಟ್ಟಿದ ಶಿವಸೇನಾ ಮುಖ್ಯ ಸಚೇತಕ ಸುನಿಲ್‌ ಪ್ರಭು

ಹತ್ತನೇ ಷೆಡ್ಯೂಲ್‌ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಸ್ಪೀಕರ್‌ ವಜಾ ಮಾಡಲು ಪೂರ್ವಯೋಜಿತವಾಗಿ ನೋಟಿಸ್‌ ನೀಡುವ ಮಾಡುವ ಮೂಲಕ ಹತ್ತನೇ ಷೆಡ್ಯೂಲ್‌ ಅನ್ನು ಬಲಹೀನಗೊಳಿಸಬಾರದು ಎಂದು ಮನವಿಯಲ್ಲಿ ವಿವರಿಸಲಾಗಿದೆ.
Maharashtra Crises
Maharashtra Crises

ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್‌ ಶಿವಸೇನೆಯ16 ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆ ಆರಂಭಿಸಿರುವುದರಿಂದ ಅದು ನಿರ್ಧಾರವಾಗುವವರೆಗೆ ಬಂಡಾಯ ಶಾಸಕರನ್ನು ಅಮಾನತು ಮಾಡುವಂತೆ ಕೋರಿ ಶಿವಸೇನೆಯ ಮುಖ್ಯ ಸಚೇತಕ ಸುನಿಲ್‌ ಪ್ರಭು ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮನವಿ ಉಲ್ಲೇಖಿಸಿದರು.

ಪ್ರಕರಣದಲ್ಲಿ ವಿಲೀನ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ, ಪ್ರಮಾಣ ವಚನ ಸ್ವೀಕರಿಸಿದ ಕ್ಷಣವೇ (ಬಂಡಾಯ ನಾಯಕ ಏಕ್‌ನಾಥ್‌ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ) ಅವರು ಹತ್ತನೇ ಶೆಡ್ಯೂಲ್‌ ಅನ್ನು ಉಲ್ಲಂಘಿಸಿದ್ದಾರೆ," ಎಂದು ಸಿಬಲ್‌ ವಾದಿಸಿದರು.

ಆಗ ನ್ಯಾ. ಸೂರ್ಯಕಾಂತ್‌ ಅವರು “ಪ್ರಕರಣದ ವಿಚಾರಣೆಯನ್ನು ನಾವು ಜುಲೈ 11ರಂದು ನಡೆಸುತ್ತೇವೆ. ಮಧ್ಯಪ್ರವೇಶ ಮನವಿಯನ್ನು ಇತರೆ ಮನವಿಗಳ ಜೊತೆ ಪಟ್ಟಿ ಮಾಡಿ. ಇತರ ಪಕ್ಷಕಾರರಿಗೂ ಮನವಿಯ ಪ್ರತಿಗಳನ್ನು ಹಂಚಿ. ನಾವು ಅದನ್ನು ಪರಿಶೀಲಿಸುತ್ತೇವೆ” ಎಂದರು.

ಡೆಪ್ಯೂಟಿ ಸ್ಫೀಕರ್‌ ಅನರ್ಹತೆ ವಿಚಾರ ನಿರ್ಧರಿಸುವವರೆಗೆ ವಿಧಾನಸಭೆ ಪ್ರವೇಶ ಅಥವಾ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಹತ್ತನೇ ಷೆಡ್ಯೂಲ್‌ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಸ್ಪೀಕರ್‌ ವಜಾ ಮಾಡಲು ಪೂರ್ವಯೋಜಿತವಾಗಿ ನೋಟಿಸ್‌ ನೀಡುವ ಮಾಡುವ ಮೂಲಕ ಹತ್ತನೇ ಷೆಡ್ಯೂಲ್‌ ಅನ್ನು ಬಲಹೀನಗೊಳಿಸಬಾರದು ಎಂದು ಮನವಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com