ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ₹20,000 ಭತ್ಯೆ: ಮಹಾರಾಷ್ಟ್ರ ಸರ್ಕಾರ ಪ್ರಕಟಣೆ

ಒಬ್ಬ ಮನೆ ಸಹಾಯಕ ಮತ್ತು ಚಾಲಕನನ್ನು ನೇಮಿಸಿಕೊಳ್ಳಲು ₹ 14,000 ಹಾಗೂ ದೂರವಾಣಿ ವೆಚ್ಚಕ್ಕಾಗಿ ₹ 6,000 ಭತ್ಯೆ ಇರುತ್ತದೆ.
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ₹20,000 ಭತ್ಯೆ: ಮಹಾರಾಷ್ಟ್ರ ಸರ್ಕಾರ ಪ್ರಕಟಣೆ
Published on

ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅವರ ನಿವೃತ್ತಿಯ ನಂತರ ಭತ್ಯೆ ಸೌಲಭ್ಯ ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಮನೆಗೆಲಸದ ಸಹಾಯಕರು, ಚಾಲಕ ಮತ್ತು ದೂರವಾಣಿ ವೆಚ್ಚಗಳಿಗೆಂದು ಬಾಂಬೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ನ್ಯಾಯಮೂರ್ತಿಗಳಿಗೆ ಸರ್ಕಾರ ಭತ್ಯೆ ನೀಡಲಿದೆ.

ಸೌಲಭ್ಯಗಳು ನ್ಯಾಯಮೂರ್ತಿಗಳ ಮರಣಾನಂತರ ಅವರ ಸಂಗಾತಿಗಳಿಗೂ ದೊರೆಯುತ್ತವೆ. ಮನೆಗೆಲಸದ ಸಹಾಯಕ ಮತ್ತು ಚಾಲಕನನ್ನು ನೇಮಿಸಿಕೊಳ್ಳಲು ₹ 14,000 ಹಾಗೂ ದೂರವಾಣಿ ವೆಚ್ಚಕ್ಕಾಗಿ ₹ 6,000 ಭತ್ಯೆ ಇರುತ್ತದೆ.

ಕೇಂದ್ರ ಕಾನೂನು ಸಚಿವಾಲಯವು ನೀಡುವ ನಿವೃತ್ತಿ ಸೌಲಭ್ಯಗಳಿಗೆ ಹೆಚ್ಚುವರಿಯಾಗಿ ಈ ಭತ್ಯೆಗಳನ್ನು ನೀಡಲಾಗತ್ತಿದೆ. ಕೇಂದ್ರ ಸರ್ಕಾರದ ಸೌಲಭ್ಯಗಳಲ್ಲಿ ಪಿಂಚಣಿ ಮೊತ್ತ, ರಜೆ ನಗದೀಕರಣ, ಮರಣ ಮತ್ತು ನಿವೃತ್ತಿ ಗ್ರಾಚ್ಯುಟಿ ಸೇರಿವೆ.

Kannada Bar & Bench
kannada.barandbench.com