ಸಬರಮತಿ ಆಶ್ರಮದ ಪುನರಭಿವೃದ್ಧಿ ವಿರುದ್ಧ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ಮಹಾತ್ಮ ಗಾಂಧಿ ಮರಿ ಮೊಮ್ಮಗ

ಅರ್ಜಿದಾರ ತುಷಾರ್ ಗಾಂಧಿ ಅವರು ಈ ಯೋಜನೆ ಮಹಾತ್ಮ ಗಾಂಧಿಯವರ ಆಶಯಕ್ಕೆ ವಿರುದ್ಧವಾಗಿದ್ದು ಆಶ್ರಮವನ್ನು ಪ್ರವಾಸಿ ಆಕರ್ಷಣೆಗೆ ಸೀಮಿತಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
Gujarat High Court
Gujarat High Court

ಸಬರಮತಿ ಆಶ್ರಮದ ಪುನರಭಿವೃದ್ಧಿ ಪ್ರಶ್ನಿಸಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಗುಜರಾತ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ಮಹಾತ್ಮ ಗಾಂಧಿಯವರ ವೈಯಕ್ತಿಕ ಆಶಯಗಳಿಗೆ ಸಂಪೂರ್ಣವಾಗಿ ಪ್ರಸ್ತಾವಿತ ಯೋಜನೆ ವಿರುದ್ಧವಾಗಿದೆ ಮತ್ತು ಸ್ವಾತಂತ್ರ್ಯ ಚಳುವಳಿಯ ಸಂದರ್ಭದ ಆಶ್ರಮ ಮತ್ತು ಸ್ಮಾರಕವನ್ನು ವಾಣಿಜ್ಯ ಪ್ರವಾಸಿ ಆಕರ್ಷಣೆಗೆ ಮಾತ್ರವೇ ಸೀಮಿತಗೊಳಿಸುತ್ತದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ ಎಂದು ʼಲೀಫ್‌ಲೆಟ್‌ʼ ಜಾಲತಾಣ ವರದಿ ಮಾಡಿದೆ.

Also Read
ಗಾಂಧೀಜಿ, ತಿಲಕ್ ವಿರುದ್ಧ ಬಳಕೆಯಾಗಿದ್ದ ದೇಶದ್ರೋಹ ಕಾನೂನು ಈಗ ದುರ್ಬಳಕೆಯಾಗುತ್ತಿದೆ: ಸುಪ್ರೀಂಕೋರ್ಟ್‌

ಉದ್ದೇಶಿತ ಯೋಜನೆಯ ಬಗ್ಗೆ ಕಳೆದ ವಾರ ಗಾಂಧಿವಾದಿಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹೈಕೋರ್ಟ್‌ ಮೊರೆ ಹೋಗಲಾಗಿದೆ. ಆಶ್ರಮ ಪುನರುಜ್ಜೀವನಗೊಳಿಸಲು ಟ್ರಸ್ಟ್‌ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕಳೆದ ಶನಿವಾರ ಹಮ್ಮಿಕೊಳ್ಳಲಾಗಿದ್ಗದ ಪ್ರತಿಭಟನಾ ಮೆರವಣಿಗೆ ಅಹಮದಾಬಾದ್‌ ತಲುಪಿತ್ತು.

1917ರಲ್ಲಿ ನಿರ್ಮಿಸಲಾದ ಎಲ್ಲಾ ಪಾರಂಪರಿಕ ಕಟ್ಟಡಗಳನ್ನು ಪುನರಭಿವೃದ್ಧಿ ಮಾಡಲು ಮತ್ತು ಆಶ್ರಮವನ್ನು ವಿಶ್ವ ದರ್ಜೆಯ ಸ್ಮಾರಕವಾಗಿ ಪರಿವರ್ತಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

Related Stories

No stories found.
Kannada Bar & Bench
kannada.barandbench.com