ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ವಿರೋಧಿಸಿ ಸುಪ್ರೀಂ ಕದತಟ್ಟಿದ ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್‌ ಗಾಂಧಿ

ಅಡ್ವೊಕೇಟ್‌ ಜನರಲ್‌ ಅವರ ಸೀಮಿತಿ ಹೇಳಿಕೆಯ ಹಿನ್ನೆಲೆಯಲ್ಲಿ ಗುಜರಾತ್‌ ಹೈಕೋರ್ಟ್‌ ಮನವಿಯನ್ನು ವಜಾ ಮಾಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
Supreme Court

Supreme Court

ಸಾಬರಮತಿ ಆಶ್ರಮದ ಪ್ರಸ್ತಾವಿತ ಪುನರಾಭಿವೃದ್ಧಿ ಯೋಜನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ (ತುಷಾರ್‌ ಅರುಣ್‌ ಗಾಂಧಿ ವರ್ಸಸ್‌ ಗುಜರಾತ್‌ ರಾಜ್ಯ).

ತುರ್ತಾಗಿ ಪ್ರಕರಣ ಆಲಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಕೋರಿದರು. “ವರ್ಚುವಲ್‌ ವಿಚಾರಣೆಯ ದಿನದಂದು ಪ್ರಕರಣವನ್ನು ನಿಗದಿಪಡಿಸಿ. ಇನ್ನೇನು ನಿರ್ಮಾಣ ಕಾಮಗಾರಿ ಆರಂಭವಾಗುತ್ತದೆ” ಎಂದು ಅವರು ಮನವಿ ಮಾಡಿದರು.

ಇದಕ್ಕೆ ಸಮ್ಮತಿಸಿದ ಸಿಜೆಐ ಅವರು ವರ್ಚುವಲ್‌ ವಿಚಾರಣೆಯ ದಿನದಂದು ಪ್ರಕರಣವನ್ನು ಪಟ್ಟಿ ಮಾಡಿ ಎಂದರು.

ಅಡ್ವೊಕೇಟ್‌ ಜನರಲ್‌ ಅವರ ಸೀಮಿತ ಹಾದಿತಪ್ಪಿಸುವ ಹೇಳಿಕೆಯನ್ನು ಪರಿಗಣಿಸಿ, ಅರ್ಜಿದಾರರ ಅಹವಾಲನ್ನು ಪರಿಗಣಿಸದೇ ಸರ್ಕಾರದ ಆದೇಶವನ್ನು ವಜಾ ಮಾಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Also Read
ಗಾಂಧೀಜಿ, ತಿಲಕ್ ವಿರುದ್ಧ ಬಳಕೆಯಾಗಿದ್ದ ದೇಶದ್ರೋಹ ಕಾನೂನು ಈಗ ದುರ್ಬಳಕೆಯಾಗುತ್ತಿದೆ: ಸುಪ್ರೀಂಕೋರ್ಟ್‌

ಸಾಬರಮತಿ ಆಶ್ರಮವು ಒಂದು ಎಕರೆಯಲ್ಲಿ ವ್ಯಾಪಿಸಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆಶ್ರಮದ ಸುತ್ತಲಿನ 55 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ವಿವರಿಸಿದ್ದರು.

“ಸದರಿ ಭೂಮಿಯು ಪ್ರೇರಣೆಯ ಚಿಲುಮೆಯಾಗಿದ್ದು, ಗಾಂಧೀಜಿಯ ಜೀವನ ಉದ್ದೇಶದ ಸ್ಮಾರಕವಾಗಿ ನಿಂತಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ. ಪುನರಾಭಿವೃದ್ಧಿಯಿಂದ ಸಾಬರಮತಿ ಆಶ್ರಮದ ನೋಟ ಬದಲಾಗಲಿದ್ದು, ಅದು ಗಾಂಧೀಜಿ ಅವರ ಸಿದ್ಧಾಂತದ ಭಾಗವಾಗಿದ್ದ ಸರಳತೆ, ಮಿತವ್ಯಯಕ್ಕೆ ವಿರುದ್ಧವಾಗಿರಲಿದೆ” ಎಂಬ ಅಳುಕನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com