Senior advocate SK Rungta and CJI Chandrachud
Senior advocate SK Rungta and CJI Chandrachud

ಎಲ್ಲಾ ಅಂಧ ವಕೀಲರಿಗೆ ಬ್ರೈಲ್ ಭಾಷಾಂತರ ಲಭ್ಯತೆ: ಎನ್ಐಸಿಗೆ ಸಿಜೆಐ ಚಂದ್ರಚೂಡ್ ಸೂಚನೆ

ಪಠ್ಯವನ್ನು ಬ್ರೈಲ್‌ಗೆ ಭಾಷಾಂತರಿಸುವ ಸಾಫ್ಟ್‌ವೇರ್ ಅನ್ನು ವಕೀಲರು ಬಳಸುತ್ತಿದ್ದು ಅದು ಎಲ್ಲಾ ಅಂಧ ವಕೀಲರಿಗೆ ಲಭ್ಯವಾಗುವಂತೆ ಮಾಡುವುದು ತನ್ನ ಉದ್ದೇಶ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
Published on

ನ್ಯಾಯಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬ್ರೈಲ್‌ಗೆ ಭಾಷಾಂತರಿಸುವ ಸಾಫ್ಟ್‌ವೇರ್ ಎಲ್ಲಾ ವಕೀಲರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಹಿರಿಯ ವಕೀಲ ಎಸ್‌ಕೆ ರುಂಗ್ಟಾ ಅವರೊಂದಿಗೆ ಮಾತುಕತೆ ನಡೆಸುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್‌ಐಸಿ) ಸೂಚಿಸುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಗುರುವಾರ ಹೇಳಿದ್ದಾರೆ.

ಪ್ರಕರಣವೊಂದರ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್‌ ಅವರು ದೃಷ್ಟಿ ಕಳೆದುಕೊಂಡಿರುವ ವಿಕಲಚೇತನರಾದ ಹಿರಿಯ ವಕೀಲ ರುಂಗ್ಟಾ ಅವರನ್ನು ಉದ್ದೇಶಿಸಿ ನೀವು ಹೇಗೆ ಬೇರೊಬ್ಬ ಕಕ್ಷೀದಾರರು ಉಲ್ಲೇಖಿಸುತ್ತಿರುವ ಪಠ್ಯ ಸಂಗ್ರಹವನ್ನು ಅನುಸರಿಸಲು ಸಾಧ್ಯವಾಗುತ್ತಿದೆ ಎಂದು ಪ್ರಶ್ನಿಸಿದರು. ಆಗ ರುಂಗ್ಟಾ ಆ ಸಂಗ್ರಹವು ಪೆನ್‌ಡ್ರೈವ್‌ನಲ್ಲಿದ್ದು ಅದನ್ನು ತಮ್ಮ ಕಂಪ್ಯೂಟರ್‌ನಿಂದ ಬ್ರೈಲ್‌ಗೆ ಅನುವಾದಿಸಲಾಗುತ್ತದೆ ಎಂದು ರುಂಗ್ಟಾ ತಿಳಿಸಿದರು. ಆಗ ಸಿಜೆಐ ಅವರು “ಇ- ಸಮಿತಿ ಅಧ್ಯಕ್ಷನಾಗಿ ಅದನ್ನು (ಎಲ್ಲರಿಗೂ) ಒದಗಿಸುವುಂತೆ ಮಾಡುವುದು ನನ್ನ ಧ್ಯೇಯ” ಎಂದರು. ಜೊತೆಗೆ ರುಂಗ್ಟಾ ಅವರೊಂದಿಗೆ ಎನ್‌ಐಸಿಯ ಮುಖ್ಯಸ್ಥರು ಸಮಾಲೋಚನೆ ನಡೆಸಲು ಕೇಳಿಕೊಳ್ಳುವುದಾಗಿ ತಿಳಿಸಿದರು.

Kannada Bar & Bench
kannada.barandbench.com