ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಮೊರೆಹೋದ ಸಿಸೋಡಿಯಾ: ಇಂದು ಮಧ್ಯಾಹ್ನ 3.50ಕ್ಕೆ ವಿಚಾರಣೆ

ಮೊದಲು ತುರ್ತು ವಿಚಾರಣೆಗೆ ಒಪ್ಪದ ಸಿಜೆಐ ನಂತರ ಇಂದು ಮಧ್ಯಾಹ್ನ 3.50ಕ್ಕೆ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
Manish Sisodia and supreme court
Manish Sisodia and supreme court
Published on

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಸಿಬಿಐ ಕ್ರಮ ಪ್ರಶ್ನಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಿಗೆ ಸಿಸೋಡಿಯಾ ಪರ ವಾದಿಸಲಿರುವ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಬೆಳಗ್ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ "ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿಯಲ್ಲಿ ನಿಮಗೆ ಬೇರೆ ಪರಿಹಾರಗಳಿವೆ" ಎಂದು ತಿಳಿಸಿದರು. ಆದರೆ ಸಿಂಘ್ವಿ ಅವರು ನ್ಯಾಯಾಲಯ ಕಲಾಪದ ಕೊನೆಗೆ ಅಥವಾ ನಾಳೆಗೆ ಆಲಿಸಬಹುದು ಎಂದು ಕೇಳಿಕೊಂಡರು. ಕಡೆಗೆ ಸಿಜೆಐ ಮಧ್ಯಾಹ್ನ 3.50ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಹಗರಣಕ್ಕೆ ಕಾರಣರಾದ ಆರೋಪದಡಿ ಭಾನುವಾರ ಸಂಜೆ ಬಂಧಿತರಾಗಿದ್ದ ಸಿಸೋಡಿಯಾ ಅವರನ್ನು ಮಾರ್ಚ್ 4 ರವರೆಗೆ ಸಿಬಿಐ ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿತ್ತು.

Kannada Bar & Bench
kannada.barandbench.com