ಚುನಾವಣಾ ಆಯೋಗದ ತೀರ್ಪಿನಲ್ಲಿ, ಮಾಧ್ಯಮ ಹಾಗೂ ಹಣಬಲದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮಾಧ್ಯಮದ ಬಹುದೊಡ್ಡ ಪಾಲು ತನ್ನ ಪಾತ್ರ ತ್ಯಜಿಸಿ ಪಕ್ಷಪಾತಿಯಾಗಿದೆ,” ಎಂದು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಇಂದು ನೀಡಿದ ಮಹತ್ವದ ತೀರ್ಪಿನಲ್ಲಿ ವಿಷಾದಿಸಿದೆ.
Supreme Court and Election Commission of india
Supreme Court and Election Commission of india

ಚುನಾವಣಾ ಆಯೋಗದ ಸ್ವಾತಂತ್ರ್ಯ, ಹಣಬಲದ ಆಟಾಟೋಪ, ರಾಜಕೀಯ ಅಪರಾಧೀಕರಣ ಹಾಗೂ ಮಾಧ್ಯಮ ಪಕ್ಷಪಾತ ಮತ್ತಿತರ ಸಂಗತಿಗಳ ಕುರಿತು ಸುಪ್ರೀಂ ಕೋರ್ಟ್‌ ಮಂಡಿಸಿದ ವಿವಿಧ ಅವಲೋಕನಗಳಿಗೆ ಚುನಾವಣಾ ಆಯೋಗ ಪ್ರಕರಣ ಗುರುವಾರ ಸಾಕ್ಷಿಯಾಯಿತು.

ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಸಮಿತಿಯ ಸಲಹೆ ಮೇರೆಗೆ ಭಾರತ ಚುನಾವಣಾ ಆಯೋಗದ ಸದಸ್ಯರ ನೇಮಕ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪಿನಲ್ಲಿ ಈ ಅವಲೋಕನಗಳಿವೆ.

ತೀರ್ಪಿನ ಪ್ರಕಟಣೆಯ ದೃಶ್ಯವನ್ನು ಇಲ್ಲಿ ಗಮನಿಸಬಹುದು:

ಸುಪ್ರೀಂ ಕೋರ್ಟ್‌ ಅವಲೋಕನ:

1. ಹಣಬಲದ ಪಾತ್ರ ಮತ್ತು ರಾಜಕೀಯದ ಅಪರಾಧೀಕರಣದ ಪಾತ್ರದಲ್ಲಿ ಭಾರಿ  ಹೆಚ್ಚಳವಾಗಿದ್ದು ಮಾಧ್ಯಮದ ಬಹುದೊಡ್ಡ ಭಾಗ ತನ್ನ ಪಾತ್ರವನ್ನು ಮರೆತು ಪಕ್ಷಪಾತಿಯಾಗಿದೆ.

2. ರಾಜಕೀಯ ಪಕ್ಷಗಳು (ಚುನಾವಣಾ ಆಯುಕ್ತರ ನೇಮಕ ಕುರಿತು) ಕಾಯಿದೆ ತರದೇ ಇರಲು ಕಾರಣವಿದ್ದು ಅಧಿಕಾರದಲ್ಲಿರುವ ಪಕ್ಷ ಆಯೋಗದ ಮೂಲಕ ಅಧಿಕಾರದಲ್ಲಿ ಉಳಿಯುವ ಅತೃಪ್ತ ಅನ್ವೇಷಣೆಯಲ್ಲಿ ತೊಡಗಿರುತ್ತದೆ.

3. ಚುನಾವಣಾ ಆಯೋಗ ಸ್ವತಂತ್ರವಾಗಿರಬೇಕು. ಅದು ತಾನು ಸ್ವತಂತ್ರ ಎಂದು ಹೇಳಿಕೊಂಡು ಅನ್ಯಾಯದಿಂದ ವರ್ತಿಸಬಾರದು.

4. ಸ್ವಾತಂತ್ರ್ಯ ಎಂದರೇನು? ಸಾಮರ್ಥ್ಯವು ಭಯದಿಂದ ಬಂಧಿತವಾಗಿರುವುದಿಲ್ಲ. ಸಾಮರ್ಥ್ಯದ ಗುಣಗಳು ಸ್ವಾತಂತ್ರ್ಯಕ್ಕೆ ಪೂರಕವಾಗಿರಬೇಕು. ಒಬ್ಬ ಪ್ರಾಮಾಣಿಕ ವ್ಯಕ್ತಿಯು ಸಾಮಾನ್ಯವಾಗಿ ನಿರ್ಭೀತನಾಗಿ ಅಧಿಕಾರಸ್ಥರು, ಬಲಾಢ್ಯರನ್ನು ಎದುರಿಸುತ್ತಾನೆ. ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಸಾಮಾನ್ಯ ವ್ಯಕ್ತಿಯು ಆ ಪ್ರಾಮಾಣಿಕ ವ್ಯಕ್ತಿಯತ್ತ ದಿಟ್ಟಿಸುತ್ತಾನೆ.
5. ಕಾನೂನಾತ್ಮಕ ಆಡಳಿತವನ್ನು ಖಾತರಿಪಡಿಸದ ಚುನಾವಣಾ ಆಯೋಗ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗುತ್ತದೆ. ಅದರ ವ್ಯಾಪಕವಾದ ಅಧಿಕಾರಗಳನ್ನು, ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ಚಲಾಯಿಸಿದರೆ, ಅದು ರಾಜಕೀಯ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

6. ಮಾಧ್ಯಮಗಳ ಪ್ರಸಾರ ಇತ್ಯಾದಿ ಸಂಗತಿಗಳ ಹೆಚ್ಚಳದಲ್ಲಿ ಚುನಾವಣಾ ವ್ಯವಸ್ಥೆಯ ದುರುಪಯೋಗದ ಪ್ರವೃತ್ತಿ ಅಡಗಿದೆ.

7. ಸರ್ಕಾರ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು.

8. ನೇಮಕಾತಿಯ ಅಧಿಕಾರಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದ್ದು ಇದು ದೇಶವ್ಯಾಪಿ ನಿಚ್ಚಳವಾಗಬಹುದು.

 9. ಮುಕ್ತ ಮತ್ತು ನ್ಯಾಯೋಚಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಚುನಾವಣಾ ಆಯೋಗದ  ಕರ್ತವ್ಯವಾಗಿದೆ.

10. ಮತದಾನದ ಶಕ್ತಿ ಸರ್ವೋಚ್ಚವಾಗಿದ್ದು, ಅತೀವ ಶಕ್ತಿಶಾಲಿ ಪಕ್ಷಗಳನ್ನು ಸೋಲಿಸಲು ಸಮರ್ಥವಾಗಿದೆ.

Kannada Bar & Bench
kannada.barandbench.com