ಗಂಡನ ವೃದ್ಧ ಪೋಷಕರನ್ನು ನೋಡಿಕೊಳ್ಳಲಾಗದ ಮಾತ್ರಕ್ಕೆ ಅದು ಕ್ರೌರ್ಯವಲ್ಲ: ಅಲಾಹಾಬಾದ್ ಹೈಕೋರ್ಟ್

ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Allahabad High Court
Allahabad High Court
Published on

ಗಂಡನ ವೃದ್ಧ ಪೋಷಕರನ್ನು ನೋಡಿಕೊಳ್ಳುವಲ್ಲಿ ವಿಫಲವಾದರೆ ಅಂತಹ ಆರೋಪ ವ್ಯಕ್ತಿನಿಷ್ಠ ಸ್ವರೂಪದ್ದಾಗಿರುವುದರಿಂದ ಅದು ಕ್ರೌರ್ಯ ಎನಿಸದು ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ತನ್ನ ವೃದ್ಧ ಪೋಷಕರನ್ನು ನೋಡಿಕೊಳ್ಳುವ ನೈತಿಕ ಕರ್ತವ್ಯ ನಿಭಾಯಿಸದೇ ಇರುವುದರಿಂದ ಪತ್ನಿಯಿಂದ ತನಗೆ ವಿಚ್ಛೇದನ ಬೇಕು ಎಂದು ಕೋರಿ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ  ನ್ಯಾಯಮೂರ್ತಿಗಳಾದ ಸೌಮಿತ್ರಾ ದಯಾಳ್ ಸಿಂಗ್ ಮತ್ತು ಡೊನಡಿ ರಮೇಶ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿದೆ.

Also Read
ವಿಚ್ಛೇದನ ಅರ್ಜಿ ನಿರ್ಧರಿಸಲು ವ್ಯಭಿಚಾರದಲ್ಲಿ ಭಾಗಿಯಾದ ಮೂರನೇ ವ್ಯಕ್ತಿ ವಿಚಾರಣೆ ಅನಗತ್ಯ: ದೆಹಲಿ ಹೈಕೋರ್ಟ್

ಆರೈಕೆಯ ಮಟ್ಟ ಎಷ್ಟು ಅಗತ್ಯವಿತ್ತು ಇಲ್ಲವೇ ಅಪೇಕ್ಷಣೀಯ ಎಂಬುದನ್ನು ಪತಿ ಹೇಳಿಲ್ಲ. ಅಲ್ಲದೆ ಅಮಾನವೀಯ ಇಲ್ಲವೇ ಕ್ರೂರ ವರ್ತನೆ ಘಟಿಸಿದೆ ಎಂದು ಅವರು ಮನವಿಯಲ್ಲಿ ಎಲ್ಲಿಯೂ ತಿಳಿಸಿಲ್ಲ ಎಂಬುದಾಗಿ ನ್ಯಾಯಾಲಯ ನುಡಿಯಿತು.

ವೃದ್ಧ ಪೋಷಕರ ಆರೈಕೆ ಮಾಡುತ್ತಿಲ್ಲ ಎಂದು ಮತ್ತೊಬ್ಬ ಸಂಗಾತಿ (ಪತಿ) ವೈವಾಹಿಕ ಗೃಹದಿಂದ ದೂರ ವಾಸಿಸಲು ನಿರ್ಧರಿಸಿದರೆ ಆಗ ಪತ್ನಿಯ ನಡೆ ಎಂದಿಗೂ ಕ್ರೌರ್ಯವಾಗದು. ಪ್ರತಿ ಮನೆಯಲ್ಲಿಯೂ ಎಂತಹ ನಿಖರ ಸ್ಥಿತಿ ಇದೆ ಎಂಬುದನ್ನು ವಿವರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ನ್ಯಾಯಾಲಯ ಯಾವುದೇ ಕಾನೂನು ಅಥವಾ ಸಿದ್ಧಾಂತ ರೂಪಿಸಲಾಗದು ಎಂದು ಅದು ವಿವರಿಸಿದೆ.

Also Read
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾತನ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು: ಮಧ್ಯಪ್ರದೇಶ ಹೈಕೋರ್ಟ್

ಪತಿ ಈ ಹಿಂದೆ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಕೋರಿ ಮೊರಾದಾಬಾದ್‌ನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ ಅರ್ಜಿ ತಿರಸ್ಕೃತಗೊಂಡ ಪರಿಣಾಮ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪತ್ನಿ ಕೌರ್ಯ ಎಸಗಿಲ್ಲ ಎಂದು ತೀರ್ಪು ನೀಡಿದ ಹೈಕೋರ್ಟ್‌ ವಿಚ್ಚೇದನ ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದಿದೆ. ಮೇಲ್ಮನವಿಯಲ್ಲಿ ಹುರುಳಿಲ್ಲವಾದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಅದು ತಿಳಿಸಿದೆ.

Kannada Bar & Bench
kannada.barandbench.com