ಸಮ್ಮತಿಯ ಲೈಂಗಿಕತೆ ವಿವಾಹದಲ್ಲಿ ಅಂತ್ಯವಾಗಲಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರ ಸಾಬೀತಿಗೆ ಆಧಾರವಾಗದು: ಕೇರಳ ಹೈಕೋರ್ಟ್

ಅತ್ಯಾಚಾರವಾಗಿದೆ ಎಂಬುದನ್ನು ಸಾಬೀತುಪಡಿಸಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದಿದೆ ನ್ಯಾಯಾಲಯ.
ಸಮ್ಮತಿಯ ಲೈಂಗಿಕತೆ ವಿವಾಹದಲ್ಲಿ ಅಂತ್ಯವಾಗಲಿಲ್ಲ ಎಂದ ಮಾತ್ರಕ್ಕೆ   ಅತ್ಯಾಚಾರ ಸಾಬೀತಿಗೆ ಆಧಾರವಾಗದು: ಕೇರಳ ಹೈಕೋರ್ಟ್

ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯಗೊಂಡಿಲ್ಲ ಎಂಬುದು ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರ ಸಾಬೀತಿಗೆ ಸಾಲದು ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ [ನವನೀತ್ ಎನ್ ನಾಥ್ ವಿರುದ್ಧ ಕೇರಳ ಸರ್ಕಾರ ನಡುವಣ ಪ್ರಕರಣ].

ಅತ್ಯಾಚಾರ ಅಪರಾಧ ಸಾಬೀತಿಗೆ ಮದುವೆಯಾಗುವ ಭರವಸೆಯ ಆಧಾರದ ಮೇಲೆ ಲೈಂಗಿಕ ಕ್ರಿಯೆಗೆ ಮಹಿಳೆಯ ಒಪ್ಪಿಗೆ ಪಡೆದಿರಬೇಕು ಮತ್ತು ಲೈಂಗಿಕ ಕ್ರಿಯೆಯ ಸಮಯದಲ್ಲಿ ಆ ಭರವಸೆ ನೀಡಿದವರಿಗೆ ತನ್ನ (ಮದುವೆಯಾಗುತ್ತೇನೆಂಬ) ಮಾತನ್ನು ಎತ್ತಿಹಿಡಿಯುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಋಜುವಾತಾಗಬೇಕು ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿಳಿಸಿದರು.

ಮೋಸದಿಂದ ಇಲ್ಲವೇ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ ನಡೆಸದ ಹೊರತು ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧ ಐಪಿಸಿ ಸೆಕ್ಷನ್‌ 376ರ ಅಡಿ ಅತ್ಯಾಚಾರಕ್ಕೆ ಸಮನಾಗಿರದು. ಇಬ್ಬರ ಲೈಂಗಿಕ ಸಂಬಂಧಕ್ಕೆ ಮದುವೆಯ ಅಂಕಿತ ಬೀಳದಿದ್ದರೂ ಕೂಡ ಲೈಂಗಿಕ ಸಮ್ಮತಿಗೆ ಧಕ್ಕೆ ತರುವ ಯಾವುದೇ ಅಂಶ ಇರದಿದ್ದಾಗ ಅದು ಅತ್ಯಾಚಾರವಾಗುವುದಿಲ್ಲ. ಇಬ್ಬರು ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರೂ ಕೂಡ ನಂತರ ಮದುವೆಗೆ ಒಪ್ಪದಿದ್ದರೆ ಅಥವಾ ಸಂಬಂಧವನ್ನು ಮದುವೆಯವರೆಗೆ ಮುನ್ನಡೆಸಲು ವಿಫಲವಾದರೆ ಆ ಅಂಶಗಳು ಅತ್ಯಾಚಾರ ಆರೋಪ ನಿಗದಿಗೆ ಸಾಕಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Also Read
ಪ್ರಾಪ್ತೆಯೊಂದಿಗೆ ಸಮ್ಮತ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ, ದುರಾಚಾರ: ಅಲಾಹಾಬಾದ್ ಹೈಕೋರ್ಟ್

ಅತ್ಯಾಚಾರವಾಗಿದೆ ಎಂಬುದನ್ನು ಸಾಬೀತುಪಡಿಸಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದು ಪೀಠ ತಿಳಿಸಿದೆ.

“ಮದುವೆಯಾಗುವ ಭರವಸೆ ಪಾಲಿಸಲು ವಿಫಲರಾದ ಕಾರಣಕ್ಕಾಗಿ ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿವರ್ತಿಸಬೇಕಾದರೆ ಪುರುಷನ ಭರವಸೆ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಹಿಳೆ ನಿರ್ಧರಿಸಿರಬೇಕು. ಮದುವೆ ಕುರಿತ ಸುಳ್ಳು ಭರವಸೆಯನ್ನು ಸಾಬೀತುಪಡಿಸಲು ಭರವಸೆ ನೀಡಿದವನಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಮಾತನ್ನು ಎತ್ತಿ ಹಿಡಿಯುವ ಉದ್ದೇಶ ಇರಬಾರದು ಮತ್ತು ಆ ಭರವಸೆ ಮಹಿಳೆ ತನ್ನನ್ನು ದೈಹಿಕ ಸಂಬಂಧಕ್ಕೆ ಸಮರ್ಪಿಸಿಕೊಳ್ಳಲು ಪ್ರೇರೇಪಿಸರಬೇಕು. ಶಾರೀರಿಕ ಮಿಲನ ಮತ್ತು ಮದುವೆಯ ಭರವಸೆಯ ನಡುವೆ ನೇರ ಸಂಬಂಧ ಇರಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಹೋದ್ಯೋಗಿ ಹಾಗೂ ವಕೀಲೆಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರಿನಡಿ ಬಂಧಿತರಾಗಿರುವ ಕೇಂದ್ರ ಸರ್ಕಾರದ ವಕೀಲ ಕೇರಳದ ನವನೀತ್ ಎನ್ ನಾಥ್ ಅವರಿಗೆ ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ನೀಡಿತು. ನವನೀತ್‌ ಅವರ ಪರವಾಗಿ ಹಿರಿಯ ವಕೀಲ ರಮೇಶ್‌ ಚಂದರ್‌ ಮತ್ತು ನ್ಯಾಯವಾದಿ ಸಿ ಪಿ ಉದಯಭಾನು, ದೂರುದಾರರ ಪರವಾಗಿ ವಕೀಲ ಜಾನ್‌ ಎಸ್‌ ರಾಲ್ಫ್‌ ಮತ್ತು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ ಎ ನೌಷಾದ್‌ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com