ಬಿಸಿಯೂಟ ಅವಿಭಾಜ್ಯ ಮೂಲಭೂತ ಹಕ್ಕು: ಯೋಜನೆ ಆರಂಭಿಸಲು ನಿರ್ಧರಿಸುವಂತೆ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್

6 ರಿಂದ 10ನೇ ತರಗತಿವರೆಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಪುನರಾರಂಭಕ್ಕೆ ಯಾವುದೇ ಪರಿಣಾಮಕಾರಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಬಿಸಿಯೂಟ ಅವಿಭಾಜ್ಯ ಮೂಲಭೂತ ಹಕ್ಕು: ಯೋಜನೆ ಆರಂಭಿಸಲು ನಿರ್ಧರಿಸುವಂತೆ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್

ಬಿಸಿಯೂಟ ಎಂಬುದು ಸಂವಿಧಾನದ 21 ಎ ವಿಧಿಯಡಿ ಅವಿಭಾಜ್ಯ ಮೂಲಭೂತ ಹಕ್ಕಾಗಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಮಧ್ಹಾಹ್ನದ ಬಿಸಿಯೂಟ ಯೋಜನೆ ಪುನರಾರಂಭಿಸುವ ಬಗ್ಗೆ ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಪೌಷ್ಠಿಕಾಂಶವನನ್ನೂ ನೇರವಾಗಿ ಒದಗಿಸಬಹುದಾದ್ದರಿಂದ ಮಧ್ಯಾಹ್ನದ ಬಿಸಿಯೂಟದ ಅಗತ್ಯತೆಯನ್ನು ನ್ಯಾಯಾಲಯ ಒತ್ತಿ ಹೇಳಿತು.

ಈ ಅಂಶವನ್ನು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಜೆ ಎಂ ಖಾಜಿ ಅವರಿದ್ದ ವಿಭಾಗೀಯ ಪೀಠ, ಆರರಿಂದ ಹತ್ತು ವರ್ಷದ ವಯೋಮಾನದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದು ಸಂವಿಧಾನದ 21 ಎ ವಿಧಿ ಅಡಿಯಲ್ಲಿ ಒದಗಿಸಲಾದ ಅವಿಚ್ಛಿನ್ನ ಮೂಲಭೂತ ಹಕ್ಕು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ರಾಜ್ಯ ಸರ್ಕಾರ ಹತ್ತನೇ ತರಗತಿಯವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಒಳಗೊಂಡಂತೆ ಶಾಲೆಗೆ ಹಾಜರಾಗುವ ಎಲ್ಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವಂತೆ ಸೂಚಿಸಿದೆ. ಆದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮತ್ತು ಅನುದಾನಿತ ಶಾಲೆಗಳಲ್ಲಿ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಹಾಜರಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದು ಅಗತ್ಯ” ಎಂದಿತು.

ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುವುದರ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಲು ಅಥವಾ ಅದಕ್ಕೆ ಒತ್ತು ನೀಡದೇ ಇರಲು ಸಾಧ್ಯವಿಲ್ಲ. ಆದ್ದರಿಂದ, 6ನೇ ತರಗತಿಯಿಂದ 10 ನೇ ತರಗತಿಯವರೆಗಿನ ಶಾಲೆಗಳನ್ನು ಭೌತಿಕ ಹಾಜರಾತಿಗಾಗಿ ತೆರೆದಿರುವವರೆಗೆ ಏಪ್ರಿಲ್‌ 15ರಿಂದ ಜಾರಿಗೆ ಬರುವಂತೆ ಮಧ್ಯಾಹ್ನದ ಊಟ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ ಎಂದು ಹೇಳಿತು.

ಶಾಲೆಗಳು ತೆರೆಯದೇ ಇದ್ದಾಗ ಪಡಿತರ (ಆಹಾರ ಧಾನ್ಯಗಳನ್ನು) ಒದಗಿಸಬಹುದಾಗಿತ್ತು. ಆದರೆ ಶಾಲೆಗಳು ತೆರೆದಿದ್ದು ವಿದ್ಯಾರ್ಥಿಗಳು ಹಾಜರಾಗುತ್ತಿರುವುದರಿಂದ ಈ ವ್ಯವಸ್ಥೆಯನ್ನು ಮುಂದುವರಿಸಲಾಗದು. ಬದಲಿಗೆ ಅವರಿಗೆ ಬಿಸಿಯೂಟವನ್ನು ಒದಗಿಸಬೇಕಾಗುತ್ತದೆ ಎಂದು ಹೇಳಿತು. ಪ್ರಕರಣವನ್ನು ಏಪ್ರಿಲ್‌ 8 ಕ್ಕೆ ಮುಂದೂಡಲಾಗಿದೆ.

ಸರ್ಕಾರ ʼಶಾಲೆಗಳನ್ನು ತೆರೆಯುತ್ತೇವೆ ಆದರೆ ಕೋವಿಡ್‌ ಇರುವ ಕಾರಣ ಮಧ್ಯಾಹ್ನದ ಬಿಸಿಯೂಟ ಒದಗಿಸುವುದಿಲ್ಲʼ ಎಂದು ಹೇಳಿದ್ದರ ಹಿಂದಿನ ತಾರ್ಕಿಕತೆಯನ್ನು ನ್ಯಾಯಾಲಯ ಈ ಹಿಂದೆ ಪ್ರಶ್ನಿಸಿತ್ತು.

Related Stories

No stories found.
Kannada Bar & Bench
kannada.barandbench.com