ರಾಖಿ ಸಾವಂತ್‌ಗೆ ಬಲವಂತದ ಚುಂಬನ: ಪ್ರಕರಣ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಮಿಖಾ ಸಿಂಗ್ ಮನವಿ

ತಾವಿಬ್ಬರೂ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡಿದ್ದು ರಾಖಿ ಅವರ ಒಪ್ಪಿಗೆ ಮೇರೆಗೆ ಎಫ್ಐಆರ್ ರದ್ದುಗೊಳಿಸುವಂತೆ ಸಿಂಗ್ ಕೋರಿದರು.
Mika Singh and Rakhi Sawant
Mika Singh and Rakhi Sawant Facebook

ಬಲವಂತದ ಚುಂಬನಕ್ಕೆ ಸಂಬಂಧಿಸಿದಂತೆ ನಟಿ ಮತ್ತು ರೂಪದರ್ಶಿ ರಾಖಿ ಸಾವಂತ್‌ ತಮ್ಮ ವಿರುದ್ಧ 2006ರಲ್ಲಿ ದಾಖಲಿಸಿದ್ದ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಗಾಯಕ ಮಿಖಾ ಸಿಂಗ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಮತ್ತು ನಿರ್ಣಾಯಕವಾಗಿ ಪರಿಹರಿಸಿಕೊಂಡಿದ್ದು, ರಾಖಿ ಅವರ ಒಪ್ಪಿಗೆಯೊಂದಿಗೆ ಎಫ್‌ಐಆರ್ ಮತ್ತು ಆರೋಪಪಟ್ಟಿ ರದ್ದುಗೊಳಿಸುವಂತೆ ಸಿಂಗ್ ಕೋರಿದರು.

Also Read
ಚುಂಬನ ಪ್ರಕರಣ: ಅಶ್ಲೀಲ ವರ್ತನೆ ಪ್ರಕರಣ ರದ್ದು ಕೋರಿದ ಶಿಲ್ಪಾ, ಮಹಾ ಸರ್ಕಾರದ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ರಾಖಿ ಅವರ ಅಫಿಡವಿಟ್‌ ನಾಪತ್ತೆಯಾಗಿದ್ದು ಇಬ್ಬರೂ ಭಿನ್ನಾಭಿಪ್ರಾಯ ಪರಿಹರಿಸಿಕೊಂಡಿದ್ದಾರೆ. ಆದ್ದರಿಂದ ತಾನು ದಾಖಲಿಸಿದ್ದ ಎಫ್‌ಐಆರ್‌ ರದ್ದುಗೊಳಿಸಲು ಆಕೆಗೆ ಯಾವುದೇ ಅಭ್ಯಂತರ ಇಲ್ಲ ಎಂದು ಆಕೆಯ ಪರ ವಕೀಲ ಆಯುಷ್‌ ಪಾಸ್ಬೋಲಾ ಅವರು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು. ಆಗ ನ್ಯಾಯಾಲಯ ಹೊಸ ಅಫಿಡವಿಟ್‌ ಸಲ್ಲಿಸಲು ರಾಖಿ ಅವರಿಗೆ ಒಂದು ವಾರ ಕಾಲವಾಕಾಶ ನೀಡಿತು. ಏಪ್ರಿಲ್‌ 17ಕ್ಕೆ ಮುಂದಿನ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.

ಹದಿಮೂರು ವರ್ಷಗಳ ಹಿಂದೆ ಅಂದರೆ ಜೂನ್ 11, 2006ರಂದು ಮಿಖಾ ಸಿಂಗ್‌ ಹುಟುಹಬ್ಬದ ದಿನ ಘಟನೆ ನಡೆದಿತ್ತು. ಬಲವಂತದ ಚುಂಬನ ಪ್ರಶ್ನಿಸಿ ರಾಖಿ ಎಫ್‌ಐಆರ್‌ ದಾಖಲಿಸಿದ್ದರು. ಪಾರ್ಟಿಯ ವಿಡಿಯೋ ಮತ್ತು ಛಾಯಾಚಿತ್ರಗಳೊಂದಿಗೆ ಘಟನೆ ವ್ಯಾಪಕ ರೀತಿಯಲ್ಲಿ ಸುದ್ದಿಗೆ ಗ್ರಾಸವಾಗಿತ್ತು.

Related Stories

No stories found.
Kannada Bar & Bench
kannada.barandbench.com