ಮತದಾನ ಮಾಡದಂತೆ ಶಾಸಕರನ್ನು ಕುತಂತ್ರದಿಂದ ಬಂಧಿಸಿದ್ದಾಗ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು: ಬಾಂಬೆ ಹೈಕೋರ್ಟ್‌

ಮತದಾನದ ಅವಕಾಶ ಕಸಿದುಕೊಳ್ಳುವ ಉದ್ದೇಶದಿಂದ ಶಾಸಕರನ್ನು ಕಂಬಿ ಹಿಂದೆ ಹಾಕಿದರೆ ಮಾತ್ರ ನ್ಯಾಯಾಲಯಗಳು ತಮ್ಮ ಅಧಿಕಾರ ಚಲಾಯಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಮತದಾನ ಮಾಡದಂತೆ ಶಾಸಕರನ್ನು ಕುತಂತ್ರದಿಂದ ಬಂಧಿಸಿದ್ದಾಗ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು: ಬಾಂಬೆ ಹೈಕೋರ್ಟ್‌
A1

ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡದಂತೆ ಹಲವು ಶಾಸಕರನ್ನು ಕುತಂತ್ರದಿಂದ ಬಂಧಿಸಿ ಇರಿಸದ ಹೊರತು ಉಳಿದ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಕಂಬಿ ಹಿಂದಿರುವ ಶಾಸಕರನ್ನು ವಿಧಾನ ಪರಿಷತ್‌ ಚುನಾವಣೆಗೆ ಮತದಾನ ಮಾಡಲು ಸಾಮಾನ್ಯವಾಗಿ ಅನುಮತಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ [ಮೊಹಮ್ಮದ್ ನವಾಬ್ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್‌ ನವಾಬ್ ಮಲಿಕ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಅಪೇಕ್ಷಿತ ಫಲಿತಾಂಶ ಪಡೆಯಲು ಮತದಾನದ ಅವಕಾಶ ಕಸಿದುಕೊಳ್ಳುವ ಸಲುವಾಗಿ ಶಾಸಕರನ್ನು ಬಂಧಿಸಿದ್ದಾಗ ಮಾತ್ರ ನ್ಯಾಯಾಲಯಗಳು ತಮ್ಮ ಅಧಿಕಾರವ್ಯಾಪ್ತಿ ಚಲಾಯಿಸಬಹುದು ಎಂದು ಹೈಕೋರ್ಟ್‌ ಹೇಳಿದೆ.

Also Read
ಎಂಎಲ್‌ಸಿ ಚುನಾವಣೆ: ಮತದಾನಕ್ಕಾಗಿ ನವಾಬ್‌ ಮಲಿಕ್, ದೇಶಮುಖ್ ಮಾಡಿದ್ದ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್ [ಚುಟುಕು]

"ಅಂತಹ ಅಸಾಧಾರಣ ಪರಿಸ್ಥಿತಿಯಲ್ಲಿ, ಶಾಸಕರ 'ಕಸ್ಟಡಿ' ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಒಂದು ತಂತ್ರವಾಗದಂತೆ ನಿರ್ದೇಶನಗಳನ್ನು ನೀಡುವಲ್ಲಿ ನ್ಯಾಯಾಲಯ ಸಮರ್ಥನೆ ನೀಡಬಹುದು," ಎಂದು ಅದು ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಸಚಿವ ನವಾಬ್ ಮಲಿಕ್‌ ಹಾಗೂ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ 23 ಪುಟಗಳ ಆದೇಶದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಬ್ಬರೂ ಶಾಸಕರು ಕೋರಿರುವ ಹಕ್ಕು ಆಖೈರಾದುದಲ್ಲ. ಶಾಸಕಾಂಗವು ನಿರ್ದಿಷ್ಟ ವರ್ಗದ ವ್ಯಕ್ತಿಗಳಿಗೆ ಮತದಾನ ಮಾಡಲು ಸ್ಪಷ್ಟ ಅನುಮತಿ ನೀಡಿಲ್ಲ. ಈ ಕಾರಣಗಳಿಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ಎನ್‌ ಜೆ ಜಾಮ್‌ದಾರ್‌ ಅಭಿಪ್ರಾಯಪಟ್ಟರು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Nawab_Malik_v__ED__Anil_Deshmukh_v__ED.pdf
Preview

Related Stories

No stories found.
Kannada Bar & Bench
kannada.barandbench.com