ವ್ಯಾಜ್ಯ ಇತ್ಯರ್ಥಪಡಿಸಿಕೊಂಡಿದ್ದಾರೆ ಸರಾಫ್- ಲೂತ್ರಾ: ದೆಹಲಿ ಹೈಕೋರ್ಟ್‌ಗೆ ಮಾಹಿತಿ

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಮಧ್ಯವರ್ತಿಯಾಗಿ ನೇಮಿಸಲಾಗಿದೆ.
Mohit Saraf, Rajiv Luthra, Delhi High Court
Mohit Saraf, Rajiv Luthra, Delhi High Court

ಲೂತ್ರಾ ಅಂಡ್‌ ಲೂತ್ರಾ ಕಾನೂನು ಕಚೇರಿಗಳ ಸಂಸ್ಥಾಪಕ ಮತ್ತು ಸಂಸ್ಥೆಯ ಮಾಜಿ ಹಿರಿಯ ಪಾಲುದಾರ ಮೋಹಿತ್ ಸರಾಫ್ ಅವರ ಕಾನೂನು ಪ್ರತಿನಿಧಿಗಳು ತಮ್ಮ ವಿವಾದ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಮುಂದೆ ಹಾಜರಾದ ಉಭಯ ಕಕ್ಷಿದಾರರ ಪರ ವಕೀಲರು, ತಮ್ಮ ವ್ಯಾಜ್ಯ ಬಗೆಹರಿದಿರುವುದರಿಂದ ಅರ್ಜಿಗಳನ್ನು ಹಿಂಪಡೆಯಲು ಬಯಸುತ್ತಿರುವುದಾಗಿ ಮೇ 10ರಂದು ತಿಳಿಸಿದರು. ಲೂತ್ರಾ ನಿಧನರಾಗಿ ಮೇ 10ಕ್ಕೆ ಒಂದು ವರ್ಷ ಸಂದಿದೆ.

ವ್ಯಾಜ್ಯ ಬಗೆಹರಿದಿರುವುದರಿಂದ ಅರ್ಜಿಗಳನ್ನು ಹಿಂಪಡೆಯಲು ಅನುಮತಿ ಕೋರಿದ್ದಾರೆ. ಅರ್ಜಿಗಳನ್ನು ಹಿಂಪಡೆಯುವಂತೆ ಅನುಮತಿಸಿ ವಜಾಗೊಳಿಸಲಾಗುತ್ತಿದೆ ಎಂದಿರುವ ಪೀಠ ವ್ಯಾಜ್ಯ ಪರಿಹರಿಸಲು ಶ್ರಮಿಸಿದ ಮಧ್ಯಸ್ಥಗಾರರಿಗೆ ಕೃತಜ್ಞತೆ ಸೂಚಿಸಿ ಅವರ ಸಹಕಾರವನ್ನು ಪ್ರಶಂಸಿಸಿತು.

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗಿತ್ತು.

ಲೂತ್ರಾ ಅಂಡ್‌ ಲೂತ್ರಾ ಪಾಲುದಾರಿಕೆಯಿಂದ ಸರಾಫ್‌ ಅವರನ್ನು ತೆಗೆದುಹಾಕಿದ ಬಳಿಕ ಎರಡೂ ಕಡೆಯವರು ಅಕ್ಟೋಬರ್ 2020ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆರಂಭದಲ್ಲಿ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ವ್ಯಾಜ್ಯ ಪರಿಹಾರಕ್ಕಾಗಿ ಮಧ್ಯಸ್ಥಿಕೆಗೆ ಮುಂದಾಗಿದ್ದರಾದರೂ ಅದು ಫಲಪ್ರದವಾಗಿರಲಿಲ್ಲ. ಮಧ್ಯಸ್ಥಿಕೆ ಕೇಂದ್ರದ ಮೂಲಕ ವಿವಾದ ಇತ್ಯರ್ತಪಡಿಸುವ ಯತ್ನವೂ ಫಲಕಾರಿಯಾಗಿರಲಿಲ್ಲ. ನಂತರ ಹಲವು ಸುತ್ತಿನ ರಾಜಿ ಮಧ್ಯಸ್ಥಿಕೆ ಮಾತುಕತೆಗಳು ನಡೆದಿದ್ದವು.

Related Stories

No stories found.
Kannada Bar & Bench
kannada.barandbench.com