ಮೋರ್ಬಿ ತೂಗುಸೇತುವೆ ದುರಂತ: ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಕೋರಿ ಸುಪ್ರೀಂಗೆ ಪಿಐಎಲ್

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 141 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆಯನ್ನು ಖಾಸಗಿ ನಿರ್ವಾಹಕರು ದುರಸ್ತಿ ಮಾಡಿದ ನಂತರ ಕಳೆದ ವಾರವಷ್ಟೇ ಪುನರಾರಂಭಿಸದ್ದರು. ಅದಾದ ನಾಲ್ಕೇ ದಿನಗಳಲ್ಲಿ ಸೇತುವೆ ಕುಸಿದು ಬಿದ್ದಿದೆ.
Morbi Bridge collapse
Morbi Bridge collapse

ಗುಜರಾತ್‌ನ ಮೋರ್ಬಿ ಸೇತುವೆ ಕುಸಿತ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌  ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಕೀಲರೊಬ್ಬರು ಸೋಮವಾರ ಸರ್ವೋಚ್ಚ ನ್ಯಾಯಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ [ವಿಶಾಲ್‌ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

137 ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾದ ಮೋರ್ಬಿ ತೂಗುಸೇತುವೆ ದುರಂತ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಅರ್ಜಿಯಲ್ಲಿ ವಕೀಲ ವಿಶಾಲ್ ತಿವಾರಿ ಉಲ್ಲೇಖಿಸಿದ್ದಾರೆ.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 141 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆಯನ್ನು ಖಾಸಗಿ ನಿರ್ವಾಹಕರು ದುರಸ್ತಿ ಮಾಡಿ ನಂತರ ಕಳೆದ ವಾರವಷ್ಟೇ ಪುನರಾರಂಭಿಸದ್ದರು. ಅದಾಗಿ ನಾಲ್ಕೇ ದಿನಗಳಲ್ಲಿ ಅದು ಕುಸಿದು ಬಿದ್ದಿದೆ.

ಪ್ರಕರಣವನ್ನು ತಿವಾರಿ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರ ಮುಂದೆ ಪ್ರಸ್ತಾಪಿಸಿ ನ್ಯಾಯಾಂಗ ತನಿಖೆ ಕೋರಿದರು. ನವೆಂಬರ್‌ 14ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸುವಂತೆ ಪೀಠ ಸೂಚಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಕಳೆದ ದಶಕದಿಂದಲೂ ನಮ್ಮ ದೇಶದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ, ಇದರಲ್ಲಿ ನಿರ್ವಹಣಾ ದೋಷ, ಕರ್ತವ್ಯ ಲೋಪ, ನಿರ್ಲಕ್ಷ್ಯದಿಂದಾಗಿ ಕಳೆದ ದಶಕದಿಂದಲೂ ನಮ್ಮ ದೇಶದಲ್ಲಿ ಇಂತಹ ತಪ್ಪಿಸಬಹುದಾಗಿದ್ದ ಸಾವು ನೋವಿನ ಪ್ರಕರಣಗಳು ಸಂಭವಿಸಿವೆ.

  • ಎಫ್‌ಐಆರ್ ಪ್ರಕಾರ, ಸೇತುವೆಗೆ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ದುರಸ್ತಿ ನಂತರ ಅಕ್ಟೋಬರ್ 26 ರಂದು ಅದನ್ನು ಸಾರ್ವಜನಿಕರು ಓಡಾಡಲು ಅನುವು ಮಾಡಿಕೊಟ್ಟಿದ್ದರು.

  • ಸೇತುವೆ ಕುಸಿದಾಗ ಅದರ ಮೇಲೆ  ಅನುಮತಿ ನೀಡಬಹುದಾದ ಸಂಖ್ಯೆಯನ್ನು ಮೀರಿ 500 ಕ್ಕೂ ಹೆಚ್ಚು ಜನರಿದ್ದರು.

  • ಸೇತುವೆ ಪುನರಾರಂಭಕ್ಕೂ ಮೊದಲು ಖಾಸಗಿ ನಿರ್ವಾಹಕರು ಯಾವುದೇ  ಅರ್ಹತಾ (ಫಿಟ್‌ನೆಸ್) ಪ್ರಮಾಣಪತ್ರ  ಪಡೆದಿರಲಿಲ್ಲ. ಜೊತೆಗೆ ಸರ್ಕಾರಿ ಅಧಿಕಾರಿಗಳು ಯಾವುದೇ ಆಡಳಿತಾತ್ಮಕ ಮೇಲ್ವಿಚಾರಣೆ ನಡೆಸಿರಲಿಲ್ಲ.

  • ಇದು ಮಾನವ ಜೀವದ ಬಗ್ಗೆ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸುವುದಿಲ್ಲ. ಇದು ಸಂವಿಧಾನದ 21 ನೇ ವಿಧಿಯಡಿ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದ್ದು ಮನವ ಹಕ್ಕುಗಳನ್ನು ಉಲ್ಲಂಘಿಸಿದ ಘೋರ ಕೃತ್ಯವಾಗಿದೆ.

  • ಮುಂದೆ ಇಂತಹ ಸಾವು ನೋವು ತಪ್ಪಿಸಲು ದೇಶದ ಹಲವು ಸೇತುವೆ, ಸ್ಮಾರಕಗಳ ಸಮೀಕ್ಷೆ ನಡೆಸಿ ಅವುಗಳ ಸ್ಥಿತಿಗತಿ ಅರಿಯುವ ಅಗತ್ಯವಿದೆ.

  • ಸುರಕ್ಷತೆ ಮತ್ತು ಪರಿಸರದ ಕಾರ್ಯಸಾಧ್ಯತೆಗಾಗಿ ಹಳೆಯ, ಅಪಾಯಕಾರಿ ಸ್ಮಾರಕಗಳು, ಸೇತುವೆಗಳ ಬಗ್ಗೆ ಸಮೀಕ್ಷೆ ನಡೆಸಿ ಅವುಗಳ ಸ್ಥಿತಿಗತಿ ಮೌಲ್ಯಮಾಪನ ಮಾಡಲು ಸಮಿತಿ  ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು.

  • ಇಂತಹ ಪ್ರಕರಣಗಳ ತ್ವರಿತ ತನಿಖೆ ನಡೆಸಲು ನಿರ್ಮಾಣ ಘಟನಾ ತನಿಖಾ ಇಲಾಖೆ ರಚಿಸಬೇಕು. 

Related Stories

No stories found.
Kannada Bar & Bench
kannada.barandbench.com