ಸಮಾಜ ಈಗ ಕೇವಲ ʼಪರಿಪೂರ್ಣ ಮಕ್ಕಳನ್ನುʼ ಪಡೆಯಲು ಹೊರಟಿದೆಯೇ? ದೆಹಲಿ ಹೈಕೋರ್ಟ್ ಪ್ರಶ್ನೆ; ಮಹಿಳೆಯ ಗರ್ಭಪಾತಕ್ಕೆ ಅವಕಾಶ

“ತಾಯಿಯ ಆಯ್ಕೆ ಅಂತಿಮ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ. ಇದನ್ನು ಪರಿಗಣಿಸಿ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದ ಪೀಠ.
Justice Prathiba M Singh with Delhi HC
Justice Prathiba M Singh with Delhi HC
Published on

ಸಮಾಜ ಈಗ ಕೇವಲ ʼಪರಿಪೂರ್ಣ ಮಕ್ಕಳನ್ನುʼ ಪಡೆಯಲು ಹೊರಟಿದೆಯೇ ಎಂದು ನಿನ್ನೆ ಪ್ರಶ್ನಿಸಿದ್ದ  ದೆಹಲಿ ಹೈಕೋರ್ಟ್‌ ತಾಯಿಯ ಆಯ್ಕೆಯೇ ಅಂತಿಮ ಎಂದು ತಿಳಿಸಿ 33 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಇಂದು ಮಹಿಳೆಯೊಬ್ಬರಿಗೆ ಅನುಮತಿ ನೀಡಿದೆ [ಶ್ರೀಮತಿ ಪೂಜಾ ಕುಮಾರಿ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಸಂದರ್ಭದಲ್ಲಿ ನ್ಯಾ. ಪ್ರತಿಭಾ ಸಿಂಗ್‌ “ತಾಯಿಯ ಆಯ್ಕೆ ಅಂತಿಮ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ. ಇದನ್ನು ಪರಿಗಣಿಸಿ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಅರ್ಜಿದಾರರು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಅಥವಾ ಅವರಿಷ್ಟದ ಯಾವುದೇ ಆಸ್ಪತ್ರೆಯಲ್ಲಿ ತಕ್ಷಣವೇ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಲಾಗಿದೆ” ಎಂದು ಆದೇಶಿಸಿದರು .

ಭಾರತದ ಕಾನೂನಿನ ಪ್ರಕಾರ, ಗರ್ಭಧಾರಣೆ ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದು ಅಂತಿಮವಾಗಿ ತಾಯಿಯ ಆಯ್ಕೆಯಾಗಿದೆ ಎಂದು ನ್ಯಾ, ಸಿಂಗ್ ಅವರು ತಿಳಿಸಿದರು.

"ಈ ರೀತಿಯ ಪ್ರಕರಣಗಳು ಮಹಿಳೆ ಎದುರಿಸಬೇಕಾದ ತೀವ್ರ ಸಂದಿಗ್ಧತೆಯನ್ನು ಎತ್ತಿ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಗರ್ಭಪಾತ ಮತ್ತುಗರ್ಭಧಾರಣೆ ಅಂತ್ಯಗೊಳಿಸುವುದರ ಸುತ್ತಲಿನ ಸಮಸ್ಯೆಗಳು ಕೂಡ ಹೆಚ್ಚೆಚ್ಚು ಸಂಕೀರ್ಣವಾಗುವುದು ವಿಧಿತ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಎಲ್‌ಎನ್‌ಜೆಪಿ ಆಸ್ಪತ್ರೆ ಸಲ್ಲಿಸಿರುವ ವೈದ್ಯಕೀಯ ವರದಿಯ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಅದು ಅಪೂರ್ಣವಾಗಿದೆ ಎಂದು ಉಲ್ಲೇಖಿಸಿತು.

ನಿನ್ನೆಯ ಪ್ರಮುಖ ಅವಲೋಕನಗಳು

ಸ್ವಲ್ಪಮಟ್ಟಿಗೆ ಮೆದುಳಿನ ಅಸಹಜತೆ ಕಂಡುಬಂದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯ 33 ವಾರಗಳ ಗರ್ಭಧಾರಣೆ ಅಂತ್ಯಗೊಳಿಸುವುದಕ್ಕೆ ಸಂಬಂಧಿಸಿದ ನೈತಿಕ ಕಳವಳವನ್ನು ದೆಹಲಿ ಹೈಕೋರ್ಟ್‌ ನಿನ್ನೆ (ಸೋಮವಾರ) ವ್ಯಕ್ತಪಡಿಸಿತ್ತು.

Also Read
ಎಂಟಿಪಿ ಕಾಯಿದೆ: 20 ವಾರ ಮೀರಿದ ಗರ್ಭ ಧರಿಸಿರುವ ಅವಿವಾಹಿತೆಗೆ ಗರ್ಭಪಾತದ ಹಕ್ಕು ನಿರಾಕರಿಸಲಾಗದು ಎಂದ ಸುಪ್ರೀಂ

ನರಶಸ್ತ್ರಚಿಕಿತ್ಸಕರು, ಸ್ತ್ರೀರೋಗತಜ್ಞರು, ಗರ್ಭಿಣಿ ಮಹಿಳೆ ಮಾತ್ರವಲ್ಲದೆ ಆಕೆಯ ಪತಿಯ ವಾದ  ಆಲಿಸಿದ್ದ ನ್ಯಾಯಾಲಯ ತಾನು ಯಾವುದೇ ನಿಲುವನ್ನು ಹೇಳುತ್ತಿಲ್ಲವಾದರೂ, ಪ್ರಸಕ್ತ ಸಮಾಜದಲ್ಲಿರುವವರು ಕೇವಲ ‘ಪರಿಪೂರ್ಣ ಮಕ್ಕಳನ್ನು’ ಪಡೆಯಲು ಹೊರಟಿದ್ದಾರೆಯೇ ಎಂಬ ಪ್ರಶ್ನೆಯನ್ನು ಎತ್ತಿತ್ತು. ಆ ಮೂಲಕ ನೈತಿಕ ಕಳವಳ ವ್ಯಕ್ತಪಡಿಸಿತ್ತು.

ತಂತ್ರಜ್ಞಾನದ ಪ್ರಗತಿಯೊಂದಿಗೆ, ಭ್ರೂಣದ ಹಂತದಲ್ಲಿ ಬಹಳಷ್ಟು ವಿಷಯಗಳನ್ನು ಪತ್ತೆಹಚ್ಚಬಹುದಾಗಿದ್ದು  ಇನ್ನೂ ಹೆಚ್ಚಿನ ಪ್ರಗತಿಯೊಂದಿಗೆ ಜನರು ಆನುವಂಶಿಕ ಪರೀಕ್ಷೆಗಳು ಅಥವಾ ಬುದ್ಧಿಮತ್ತೆ ಪರೀಕ್ಷೆಗಳನ್ನು ಸಹ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಅಂತಹ ಮಕ್ಕಳೇ ಬೇಡ ಎಂದು ಪೋಷಕರು ಹೇಳಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಇದೇ ವೇಳೆ ತಾನು ಯಾವುದೇ ನಿಲು

Kannada Bar & Bench
kannada.barandbench.com