[ಮುಲ್ಲಪೆರಿಯಾರ್‌ ಜಲಾಶಯ] ಮೇಲ್ವಿಚಾರಣಾ ಸಮಿತಿ ಪುನರ್‌ ರಚಿಸಲು ಸುಪ್ರೀಂ ಕೋರ್ಟ್‌ ಆದೇಶ

ಮುಲ್ಲಪೆರಿಯಾರ್‌ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹಾಲಿ ಇರುವ ಮೇಲ್ವಿಚಾರಣಾ ಸಮಿತಿಯನ್ನು ಪುನರ್‌ ರಚಿಸಿ ಮತ್ತು ಅದನ್ನು ಬಲಪಡಸಿಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ.
[ಮುಲ್ಲಪೆರಿಯಾರ್‌ ಜಲಾಶಯ] ಮೇಲ್ವಿಚಾರಣಾ ಸಮಿತಿ ಪುನರ್‌ ರಚಿಸಲು ಸುಪ್ರೀಂ ಕೋರ್ಟ್‌ ಆದೇಶ
Mullaperiyar dam and Supreme Court

ಕೇರಳದಲ್ಲಿರುವ ತಮಿಳುನಾಡಿನ ನಿರ್ವಹಣೆಯಲ್ಲಿರುವ ಮುಲ್ಲಪೆರಿಯಾರ್‌ ಜಲಾಶಯವನ್ನು ನಿರ್ವಹಿಸುವ ಹಾಲಿ ಮೇಲ್ವಿಚಾರಣಾ ಸಮಿತಿಯನ್ನು ಪುನರ್‌ ರಚಿಸಿ ಅದನ್ನು ಬಲಪಡಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ (ಡಾ. ಜೋ ಜೋಸೆಫ್‌ ವರ್ಸಸ್‌ ತಮಿಳುನಾಡು ರಾಜ್ಯ ಮತ್ತು ಇತರರು).

ಅಳತೆ ಮಾಪಕತ್ವ ಮತ್ತು ಜಲಾಶಯದ ಸುರಕ್ಷತೆಯ ಬಗ್ಗೆ ಚೆನ್ನಾಗಿ ತಿಳಿದಿರುವ ತಮಿಳುನಾಡು ಮತ್ತು ಕೇರಳದ ತಲಾ ಒಬ್ಬೊಬ್ಬರು ತಾಂತ್ರಿಕ ತಜ್ಞರನ್ನು ಎರಡು ವಾರಗಳಲ್ಲಿ ಸಮಿತಿಗೆ ನೇಮಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿದೆ.

Also Read
ಮುಲ್ಲಪೆರಿಯಾರ್‌ ಜಲಾಶಯದ ಸುರಕ್ಷತೆ ಕುರಿತು ಹೊಸ ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಜಲ ಆಯೋಗದ ಮಾಹಿತಿ

“ಹಾಲಿ ಇರುವ ಮೇಲ್ವಿಚಾರಣಾ ಸಮಿತಿಯನ್ನು ಬಲಪಡಿಸುವ ದೃಷ್ಟಿಯಿಂದ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸೇರಿದ ಅಳತೆ ಮಾಪಕತ್ವ ಮತ್ತು ಜಲಾಶಯ ನಿರ್ವಹಣೆಯ ಬಗ್ಗೆ ತಿಳಿದಿರುವ ತಲಾ ಒಬ್ಬೊಬ್ಬರು ತಾಂತ್ರಿಕ ತಜ್ಞರನ್ನು ಸಮಿತಿಗೆ ನೇಮಕ ಮಾಡಬೇಕು ಎಂಬ ಸಲಹೆಗೆ ನಮ್ಮ ಸಹಮತವಿದೆ” ಎಂದು ಪೀಠ ಹೇಳಿದೆ.

ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಜವಾಬ್ದಾರಿಯಾಗಿರುವ ತಮಿಳುನಾಡು ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳು ಸಲಹಾ ಸಮಿತಿಗೆ ಸಲಹೆಗಳನ್ನು ನೀಡಬೇಕು ಎಂದು ನ್ಯಾಯಾಲಯದ ಆದೇಶ ಮಾಡಿದೆ.

Related Stories

No stories found.