ಹೋರಾಟಗಾರ್ತಿ ಸುಧಾಗೆ ಕಾರಾಗೃಹದಲ್ಲಿ ಪುಸ್ತಕ ಓದಲು ಅನುಮತಿ ನೀಡಿದ ಮುಂಬೈ ನ್ಯಾಯಾಲಯ

ಸುಧಾ ಭಾರಧ್ವಾಜ್ ಅವರಿಗೆ ನೀಡಿರುವ ಪುಸ್ತಕಗಳಲ್ಲಿ ಯಾವುದೇ ರೀತಿಯ ಆಕ್ಷೇಪಿತ ವಿಚಾರಗಳಿಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಬೈಕುಲ್ಲಾದ ಕಾರಾಗೃಹ ಅಧಿಕಾರಿಗೆ ಸೂಚಿಸಿದ ಸೆಷನ್ಸ್ ನ್ಯಾಯಾಧೀಶರು.
ಹೋರಾಟಗಾರ್ತಿ ಸುಧಾಗೆ ಕಾರಾಗೃಹದಲ್ಲಿ ಪುಸ್ತಕ ಓದಲು ಅನುಮತಿ ನೀಡಿದ ಮುಂಬೈ ನ್ಯಾಯಾಲಯ

ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮುಂಬೈನ ಬೈಕುಲ್ಲಾದ ಸೆರೆಮನೆಯಲ್ಲಿ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರ್ತಿ, ವಕೀಲೆ ಸುಧಾ ಭಾರಧ್ವಜ್‌ ಅವರಿಗೆ ಓದುವ ಸಲುವಾಗಿ ತಿಂಗಳಿಗೆ ಐದು ಪುಸ್ತಕಗಳನ್ನು ಪಡೆಯಲು ಮುಂಬೈ ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿದೆ.

ಜೈಲಿನ ಹೊರಗಿನಿಂದ ತರಿಸಲಾದ ಪುಸ್ತಕಗಳಲ್ಲಿ ನಿಷೇಧಿತ ರೆವಲ್ಯೂಷನರಿ ಡೆಮಾಕ್ರಟಿಕ್‌ ಫ್ರಂಟ್‌ ಅಥವಾ ಸಿಪಿಐ ಮಾವೋವಾದಿ ಸಂಘಟನೆಗಳ ಪ್ರಚಾರಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಯಾವುದೇ ಆಕ್ಷೇಪಾರ್ಹ ಅಂಶಗಳಿಲ್ಲ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಭಾರದ್ವಜ್‌ ಅವರಿಗೆ ಪುಸ್ತಕಗಳನ್ನು ಬಳಸಲು ಅನುವು ಮಾಡಿಕೊಡಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ ಇ ಕೋಥಾಲಿಕರ್ ಅವರು ಬೈಕುಲ್ಲಾ ಜೈಲಿನ ಅಧೀಕ್ಷಕರಿಗೆ ಸೂಚಿಸಿದ್ದಾರೆ. ಅಲ್ಲದೆ ಅಶ್ಲೀಲ ವಿಷಯಗಳನ್ನುಳ್ಳ ಪುಸ್ತಕಗಳಿಗೆ ಕೂಡ ಅನುಮತಿ ನೀಡಬಾರದು ಎಂದು ಪೀಠ ತಿಳಿಸಿದೆ.

Also Read
ನನ್ನ ವಿರುದ್ಧದ ಕೀಳು ಆರೋಪಗಳನ್ನು ಎನ್ಐಎ ಮತ್ತದರ ವಕೀಲರು ಹಿಂಪಡೆಯಲಿ: ಸುಧಾ ಭಾರದ್ವಾಜ್ ಅರ್ಜಿ
Also Read
ಸುಧಾ ಭಾರದ್ವಾಜ್ ಪ್ರಕರಣ ಊರ್ಜಿತ ಯೋಗ್ಯ, ಸಾಮಾನ್ಯ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಬಾರದು ಎಂದು ಕೇಳಿದ 'ಸುಪ್ರೀಂ'

ನ್ಯಾಯಾಲಯದ ಅನುಮತಿ ಇಲ್ಲದೆ ಸುಧಾ ಅವರಿಗೆ ಪುಸ್ತಕ ನೀಡಲು ಸಾಧ್ಯವಿಲ್ಲ ಎಂದು ಅಧೀಕ್ಷಕರು ಹೇಳಿದ ನಂತರ ಸುಧಾ ಪರ ವಕೀಲೆ ಚಾಂದನಿ ಚಾವ್ಲಾ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ಚಾವ್ಲಾ ಅವರು ದಾಖಲೆಯಲ್ಲಿ ಅಫಿಡವಿಟ್‌ ಸಲ್ಲಿಸಿದ ನಂತರ ನ್ಯಾಯಾಲಯ ಅರ್ಜಿಗೆ ಅನುಮತಿ ನೀಡಿತ್ತು.

Related Stories

No stories found.
Kannada Bar & Bench
kannada.barandbench.com