ಪತ್ನಿ ಭೇಟಿ ಮಾಡಲು, ಖಾಸಗಿ ವೈದ್ಯರಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಲು ನರೇಶ್ ಗೋಯಲ್‌ಗೆ ಮುಂಬೈ ಕೋರ್ಟ್ ಅನುಮತಿ

ಕಳೆದ ವಾರ ಜಾಮೀನು ಅರ್ಜಿಯ ವಿಚಾರಣೆಯ ಸಮಯದಲ್ಲಿ ಜೆಟ್ ಏರ್‌ವೇಸ್‌ ಸಂಸ್ಥಾಪಕ ಕಣ್ಣೀರಿಟ್ಟ ನಂತರ ಮಾನವೀಯ ನೆಲೆಯಲ್ಲಿ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಈ ಆದೇಶ ಮಾಡಿದೆ.
Naresh Goyal and ED
Naresh Goyal and ED

ಜೆಟ್ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ಅವರು ತಮ್ಮ ಪತ್ನಿ ಭೇಟಿ ಮಾಡಲು ಮತ್ತು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ವೈದ್ಯರನ್ನು ಸಂಪರ್ಕಿಸಲು ಮುಂಬೈ ನ್ಯಾಯಾಲಯ ಅನುಮತಿ ನೀಡಿದೆ [ನರೇಶ್ ಗೋಯಲ್ ವಿರುದ್ಧ ಜಾರಿ ನಿರ್ದೇಶನಾಲಯ]

ಗೋಯಲ್ ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ಕೆಲವೇ ದಿನಗಳಲ್ಲಿ ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರು ಜನವರಿ 9ರಂದು ಈ ಆದೇಶ ಮಾಡಿದ್ದಾರೆ.

ಜನವರಿ 10 ಮತ್ತು ಜನವರಿ 12ರ ನಡುವೆ ಗೋಯಲ್ ಅವರು ತಮ್ಮ ಪತ್ನಿಯನ್ನು ಭೇಟಿ ಮಾಡಲು ಮತ್ತು ವಿಶೇಷ ಅಗತ್ಯಗಳಿಗಾಗಿ ಐವರು ಖಾಸಗಿ ವೈದ್ಯರನ್ನು ಭೇಟಿಯಾಗಲು ಅನುಮತಿ ನೀಡಲಾಗಿದೆ.

ಗೋಯಲ್ ಅವರ ಪತ್ನಿ ಹಾಸಿಗೆ ಹಿಡಿದಿದ್ದಾರೆ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಿ ಹಾಗೂ ಗೋಯಲ್‌ ತಮ್ಮ ವೈದ್ಯಕೀಯ ಕಾರಣಗಳಿಗಾಗಿ ವೈದ್ಯರನ್ನು ಸಂಪರ್ಕಿಸುವ ಸಲುವಾಗಿ ನ್ಯಾಯಾಧೀಶರು ಈ ಅನುಮತಿ ನೀಡಿದ್ದಾರೆ.

"ಗೋಯೆಲ್‌ ಅವರ ಏಕೈಕ ಪುತ್ರಿ ಸಹ ತನ್ನ ತಾಯಿಯನ್ನು ನೋಡಿಕೊಳ್ಳಲು ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ವರದಿಯಾಗಿದೆ. ಈ ರೀತಿಯಾಗಿ, ಆರೋಪಿ ಮತ್ತು ಅವರ ಹೆಂಡತಿ ಅನಾಥರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹೆಂಡತಿಯನ್ನು ಒಮ್ಮೆ ಭೇಟಿಯಾಗ ಬಯಸುವುದು ಸಹಜ" ಎಂದು ನ್ಯಾಯಾಲಯ ಹೇಳಿದೆ.

7,000 ಕೋಟಿ ರೂಪಾಯಿಗಳ ವಂಚನೆ ಆರೋಪದ ಮೇಲೆ ಕೆನರಾ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಗೋಯಲ್ ಅವರನ್ನು ಸೆಪ್ಟೆಂಬರ್ 1ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ತನ್ನ ಬಂಧನವನ್ನು ಪ್ರಶ್ನಿಸಿ ಮತ್ತು ತನ್ನ ಬಿಡುಗಡೆಯನ್ನು ಕೋರಿ ಗೋಯಲ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ನಂತರ ಗೋಯಲ್ ಜಾಮೀನಿಗಾಗಿ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿ ಆರೋಪಿಯಾಗಿರುವ ಗೋಯೆಲ್‌ ಅವರು ವಿಶೇಷ ನ್ಯಾಯಾಲಯಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದಂತೆ ಮನವಿ ಮಾಡಿದ್ದರು.

ಜಾಮೀನು ಅರ್ಜಿಯ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದ ಗೋಯೆಲ್‌ ಅವರು ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾಯಿತು ಮತ್ತು ಇನ್ನೂ ಅವರ ತಪಾಸಣೆಯ ಬಗ್ಗೆ ಖಚಿತತೆ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದ್ದರಿಂದ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ಬದಲು ಜೈಲಿನಲ್ಲಿಯೇ ಇರಲು ಬಯಸುತ್ತೇನೆ ಎಂದು ಗೋಯೆಲ್‌ ಹೇಳಿದ್ದರು.

ಈ ಬೆಳವಣಿಗೆಗಳ ನಂತರ ವಿಶೇಷ ನ್ಯಾಯಾಲಯವು ಹೃದಯ ತಜ್ಞರು, ದಂತವೈದ್ಯರು ಮತ್ತು ಮೂಳೆ ತಜ್ಞರು ಸೇರಿದಂತೆ ವೈದ್ಯರನ್ನು ನೋಡಲು ಗೋಯಲ್ ಅವರಿಗೆ ಅನುಮತಿ ನೀಡಿತು. ಗೋಯಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ನೇರವಾಗಿ ಆಸ್ಪತ್ರೆಗೆ ದಾಖಲಿಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

[ಆದೇಶ ಓದಿ]

Attachment
PDF
Naresh Goyal v. ED.pdf
Preview
Kannada Bar & Bench
kannada.barandbench.com