ಜುಹು ಬಂಗಲೆ ಕುರಿತು ಬಿಎಂಸಿ ನೋಟಿಸ್: ಬಾಂಬೆ ಹೈಕೋರ್ಟ್‌ಗೆ ಕೇಂದ್ರ ಸಚಿವ ನಾರಾಯಣ ರಾಣೆ ಅರ್ಜಿ [ಚುಟುಕು]

Narayan Rane and BMC

Narayan Rane and BMC

Published on

ಮುಂಬೈನ ಜುಹುನಲ್ಲಿರುವ ತಾವು ವಾಸಿಸುವ ಆದಿಶ್ ಬಂಗಲೆಗೆ ಸಂಬಂಧಿಸಿದಂತೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನೀಡಿರುವ ನೋಟಿಸ್‌ ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ನಾರಾಯಣ ರಾಣೆ ತಮ್ಮ ಕಂಪನಿಯ ಮೂಲಕ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಣೆ ಮತ್ತವರ ಕುಟುಂಬ ಆದಿಶ್ ಬಂಗಲೆಯಲ್ಲಿ ವಾಸವಿದೆ. ಆದರೆ ನಿವೇಶನ ಆರ್ಟ್‌ಲೈನ್‌ ಪ್ರಾಪರ್ಟೀಸ್‌ ಪ್ರೈ ಲಿಮಿಟೆಡ್‌ ಒಡೆತನದಲ್ಲಿರುವುದರಿಂದ ಕಂಪೆನಿಯ ಮೂಲಕ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಬಿಎಂಸಿ ನೋಟಿಸ್‌ ನೀಡಿರುವ ನೋಟಿಸ್‌ ದುರುದ್ದೇಶಪೂರ್ವಕ ಮತ್ತು ಅಕ್ರಮವಾಗಿದ್ದು ಇದರಿಂದ ತನ್ನ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ. ಹೀಗಾಗಿ ನೋಟಿಸ್‌ ರದ್ದುಪಡಿಸಬೇಕು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ನ್ಯಾಯಮೂರ್ತಿಗಳಾದ ಎ ಎ ಸಯದ್ ಮತ್ತು ಅಭಯ್ ಅಹುಜಾ ಅವರಿರುವ ಪೀಠ ನಾಳೆ ಅರ್ಜಿಯ ವಿಚಾರಣೆ ನಡೆಸಲಿದೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com