ರಾಷ್ಟ್ರೀಯ ಲೋಕ ಅದಾಲತ್‌ ಮಾರ್ಚ್‌ 16ಕ್ಕೆ ಮುಂದೂಡಿಕೆ

ಎನ್‌ಐ ಕಾಯಿದೆ ಪ್ರಕರಣಗಳು, ಬ್ಯಾಂಕ್‌ ಮತ್ತು ವಾಣಿಜ್ಯ ದಾವೆಗಳಿಗೆ ವಿಶೇಷ ಆದ್ಯತೆ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಕೆಎಸ್‌ಎಲ್‌ಎಸ್‌ಎ ತಿಳಿಸಿದೆ.
Lok adalat
Lok adalat

ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್‌ ಅನ್ನು ಮಾರ್ಚ್‌ 9ಕ್ಕೆ ಬದಲಾಗಿ ಮಾರ್ಚ್‌ 16ಕ್ಕೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಮಾಹಿತಿ ರವಾನಿಸಿದೆ.

ಕೆಎಸ್‌ಎಲ್‌ಎಸ್‌ಎ ಪ್ಯಾಟ್ರನ್-ಇನ್‌ ಚೀಫ್‌ ಆದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ದಿನಾಂಕ ಬದಲಾವಣೆಗೆ ಅನುಮೋದಿಸಿದ್ದಾರೆ. ಹೀಗಾಗಿ, ಮಾರ್ಚ್‌ 16ರಂದು ಲೋಕ ಅದಾಲತ್‌ ನಡೆಸುವಂತೆ ನನಗೆ ನಿರ್ದೇಶನ ನೀಡಲಾಗಿದೆ. ಅಂದು ಎನ್‌ಐ ಕಾಯಿದೆ ಪ್ರಕರಣಗಳು, ಬ್ಯಾಂಕ್‌ ಮತ್ತು ವಾಣಿಜ್ಯ ದಾವೆಗಳಿಗೆ ವಿಶೇಷ ಆದ್ಯತೆ ನೀಡುವಂತೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com