ದಿವಾಳಿತನ ಪ್ರಕ್ರಿಯೆ: ಗೋಫಸ್ಟ್ ಏರ್‌ಲೈನ್ಸ್‌ ಮನವಿಗೆ ಸಮ್ಮತಿ ಸೂಚಿಸಿದ್ದ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ

ಗೋ ಫಸ್ಟ್ ಏರ್‌ಲೈನ್ಸ್‌ ವಿಮಾನಗಳ ಗುತ್ತಿಗೆದಾರರು ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಲ್ಲಿಸಿದ್ದ ಮನವಿಯನ್ನು ತಿರಸಿದ ನ್ಯಾಯಮಂಡಳಿ.
GoAirlines, NCLAT
GoAirlines, NCLAT
Published on

ಸ್ವಯಂ ದಿವಾಳಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಗೋ ಫಸ್ಟ್‌ ಏರ್‌ಲೈನ್ಸ್‌ ಸಲ್ಲಿಸಿದ್ದ ಅರ್ಜಿಗೆ ಸಮ್ಮತಿ ಸೂಚಿಸಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಸೋಮವಾರ ಎತ್ತಿಹಿಡಿದಿದೆ.

ಗೋ ಫಸ್ಟ್ ಏರ್‌ಲೈನ್ಸ್‌ನ ವಿಮಾನಗಳ ಗುತ್ತಿಗೆದಾರರು ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಲ್ಲಿಸಿದ್ದ ಮನವಿಯನ್ನು ಎನ್‌ಸಿಎಲ್‌ಎಟಿಯ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಸದಸ್ಯ (ತಾಂತ್ರಿಕ) ಬರುನ್ ಮಿತ್ರಾ ಇದೇ ವೇಳೆ ತಿರಸ್ಕರಿಸಿದರು.

ಗೋ ಫಸ್ಟ್ ಏರ್‌ಲೈನ್ಸ್ ಸಲ್ಲಿಸಿದ ಅರ್ಜಿಯನ್ನು ದೆಹಲಿಯ ಎನ್‌ಸಿಎಲ್‌ಟಿ ಪುರಸ್ಕರಿಸಿದ ಬಳಿಕ ಗೋ ಫಸ್ಟ್ ಏರ್‌ಲೈನ್ಸ್‌ಗೆ 21 ವಿಮಾನಗಳನ್ನು ಗುತ್ತಿಗೆ ನೀಡಿದ್ದ ಗುತ್ತಿಗೆದಾರ ಕಂಪೆನಿಗಳಾದ ಎಸ್‌ಎಮ್‌ಬಿಸಿ ಏವಿಯೇಷನ್ ಕ್ಯಾಪಿಟಲ್ ಲಿಮಿಟೆಡ್, ಜಿವೈ ಏವಿಯೇಷನ್ ಮತ್ತು ಎಸ್‌ಎಫ್‌ವಿ ಏರ್‌ಕ್ರಾಫ್ಟ್ ಹೋಲ್ಡಿಂಗ್ಸ್, ಎನ್‌ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಿದ್ದವು.  

ಆದರೆ ನ ಪರಿಹಾರಕ್ಕಾಗಿ ನ್ಯಾಯ ನಿರ್ಣಯ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಮೇಲ್ಮನವಿದಾರರಿಗೆ ಎನ್‌ಸಿಎಲ್‌ಎಟಿ ಸೂಚಿಸಿದೆ.  

Kannada Bar & Bench
kannada.barandbench.com