ಎನ್‌ಸಿಆರ್‌ಬಿ 2020 ದತ್ತಾಂಶ: ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಮಾಣದಲ್ಲಿ ಶೇ. 24 ಇಳಿಕೆ

ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿ ಹಾನಿ, ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ 2020ರಲ್ಲಿ 2,217 ಪ್ರಕರಣಗಳು ದಾಖಲಾಗಿವೆ.
The NCRB released its statistics on crimes that took place all over the country in 2020.
The NCRB released its statistics on crimes that took place all over the country in 2020.

2020ನೇ ಸಾಲಿನಲ್ಲಿ ದೆಹಲಿಯಲ್ಲಿ ಮಹಿಳೆಯರ ಮೇಲಿನ 9,782 ಅಪರಾಧ ಪ್ರಕರಣಗಳು ದಾಖಲಾಗಿದ್ದು 2019 ಕ್ಕೆ ಹೋಲಿಸಿದರೆ ಈ ಅಪರಾಧ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ. ಅದೇ ರೀತಿ, ಮುಂಬೈನಲ್ಲಿ ಸ್ತ್ರೀಯರ ಮೇಲಿನ ಅಪರಾಧದಲ್ಲಿ ಶೇ 30ರಷ್ಟು ಇಳಿಕೆ ಕಂಡಿದೆ. ಹಿಂದಿನ ವರ್ಷ ಅಲ್ಲಿ 6,519ರಷ್ಟು ಪ್ರಕರಣಗಳು ದಾಖಲಾಗಿದ್ದವು. ಆದರೆ ಕೋಲ್ಕತ್ತಾದಲ್ಲಿ ಇಂತಹ ಅಪರಾಧಗಳು ಸಂಖ್ಯೆ 1,474 ರಿಂದ 2,001 ಕ್ಕೆ ಏರಿಕೆಯಾಗಿದೆ.

Crimes against women in metros
Crimes against women in metros

ಬೆಂಗಳೂರಿನಲ್ಲಿ 2019ರಲ್ಲಿ ಮಹಿಳೆಯರ ಮೇಲೆ 3,486 ಪ್ರಕರಣಗಳು ದಾಖಲಾಗಿದ್ದವು. ಈಗ ಅವುಗಳ ಸಂಖ್ಯೆ 2,730ರಷ್ಟು ಇಳಿಕೆಯಾಗಿದೆ. ಲಕ್ನೋದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಇಂತಹ ಅಪರಾಧಗಳಲ್ಲಿ 8.7% ರಷ್ಟು ಹೆಚ್ಚಳವಾಗಿದೆ. ಕೊಯಮತ್ತೂರಿನಲ್ಲಿ 2020 ರಲ್ಲಿ ಅಂತಹ ಅಪರಾಧಗಳಿಗೆ ಸಂಬಂಧಿಸಿದಂತೆ ಕೇವಲ 97 ಪ್ರಕರಣಗಳು ದಾಖಲಾಗಿವೆ.

Crimes against women in states
Crimes against women in states

ಇನ್ನು ರಾಜ್ಯಗಳಿಗೆ ಸಂಬಂಧಿಸಿದಂತೆ ಗಮನಿಸಿದರೆ, 2019ಕ್ಕೆ ಹೋಲಿಸಿದರೆ 2020ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಶೇ 22ರಷ್ಟು ಹೆಚ್ಚಳ ದಾಖಲಾಗಿದೆ. ಮಹಿಳೆಯರ ಮೇಲಿನ ಅಪರಾಧದ ಸಂಖ್ಯೆ 29,859 ರಿಂದ 36,439 ಕ್ಕೆ ಹೆಚ್ಚಳವಾಗಿದೆ. 2020ರಲ್ಲಿ ಉತ್ತರ ಪ್ರದೇಶವು ಮಹಿಳೆಯರ ಮೇಲಿನ ಹೆಚ್ಚಿನ ಸಂಖ್ಯೆಯ ಅಪರಾಧಗಳಿಗೆ ಸಾಕ್ಷಿಯಾಗಿದ್ದರೂ 2019ಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ 59,853 ರಿಂದ 49,385 ಕ್ಕೆ ಇಳಿದಿದೆ. ಆ ಮೂಲಕ ಶೇ 17ರಷ್ಟು ಕುಸಿತ ಕಂಡಿದೆ.

ಒಟ್ಟಾರೆ ಗಂಡ ಮತ್ತು ಆತನ ಸಂಬಂಧಿಕರಿಂದ ನಡೆದ ಕ್ರೌರ್ಯದಲ್ಲಿ ಶೇ.30.2ರಷ್ಟು ಪ್ರಕರಣಗಳು ದಾಖಲಾಗಿವೆ. ಮಹಿಳೆಯ ಘನತೆಗೆ ಚ್ಯುತಿ ತರುವ ಪ್ರಕರಣಗಳ ಸಂಖ್ಯೆ ಶೇ. 19.7ರಷ್ಟು ಹಾಗೂ ಮಹಿಳೆಯರ ಅಪಹರಣ ಮತ್ತು ಒತ್ತೆ ಪ್ರಕರಣಗಳು ಶೇ. 19ರಷ್ಟು ದಾಖಲಾಗಿದ್ದರೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ. 7.2ರಷ್ಟಿದೆ.

ಮಕ್ಕಳ ವಿರುದ್ಧದ ಅಪರಾಧಗಳು

ದೇಶದಲ್ಲಿ 2020ರ ಸಾಲಿನಲ್ಲಿ 4,483 ಮಕ್ಕಳು ನಾಪತ್ತೆಯಾಗಿದ್ದು ಅವರ ಅಪಹರಣ ನಡೆದಿದೆ ಎಂದು ಅಂದಾಜಿಸಲಾಗಿದೆ. ದೆಹಲಿಯೊಂದರಲ್ಲೇ, 1,809 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಮಹಾನಗರಗಳಲ್ಲಿ, ಬೆಂಗಳೂರಿನಲ್ಲಿ 631 ಮಕ್ಕಳು ನಾಪತ್ತೆಯಾಗಿದ್ದರೆ, ಮಹಾರಾಷ್ಟ್ರದಲ್ಲಿ 622 ಮಕ್ಕಳು ಈ ಅಪರಾಧದ ಬಲಿಪಶುಗಳಾಗಿದ್ದಾರೆ. 2020ರಲ್ಲಿ ದೇಶದಲ್ಲಿ 15,820 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು ಅವರಲ್ಲಿ 15,633 ಬಾಲಕಿಯರು ಮತ್ತು 187 ಬಾಲಕರು ಸೇರಿದ್ದಾರೆ.

ಆದರೂ ಮಕ್ಕಳ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 2020 ರಲ್ಲಿ 1,28,531 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2019 ಕ್ಕೆ ಹೋಲಿಸಿದರೆ 13.2% ನಷ್ಟು ಇಳಿಕೆ ಕಂಡುಬಂದಿದೆ.

Offences against State
Offences against State

ದೇಶದ್ರೋಹ ಮತ್ತು ಯುಎಪಿಎ ಅಪರಾಧಗಳು

ಸಾರ್ವಜನಿಕ ಆಸ್ತಿ ಹಾನಿ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ 2020ನೇ ಸಾಲಿನಲ್ಲಿ 2,217 ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಇಂತಹ 668 ಪ್ರಕರಣಗಳು ಕಂಡು ಬಂದಿದ್ದರೆ ಅಸ್ಸಾಂನಲ್ಲಿ 333 ಪ್ರಕರಣಗಳು ದಾಖಲಾಗಿವೆ.. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,613 ರಷ್ಟಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 27ರಷ್ಟು ಇಳಿಕೆಯಾಗಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020 ರಲ್ಲಿ 73 ದೇಶದ್ರೋಹ ಪ್ರಕರಣಗಳು (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ)ದಾಖಲಾಗಿವೆ. ಜಮ್ಮು ಮತ್ತು ಕಾಶ್ಮೀರವು 287 ಯುಎಪಿಎ ಪ್ರಕರಣಗಳಿಗೆ ಸಾಕ್ಷಿಯಾಗಿದ್ದು, ಮಣಿಪುರದಲ್ಲಿ 169 ಪ್ರಕರಣಗಳು ಮತ್ತು ಜಾರ್ಖಂಡ್‌ನಲ್ಲಿ 86 ಪ್ರಕರಣಗಳಿವೆ.

ಎಸ್‌ಸಿ/ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯ

2020ರಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವಿರುದ್ಧ ಒಟ್ಟು 50,291 ಅಪರಾಧಗಳು ನಡೆದಿವೆ. ಉತ್ತರ ಪ್ರದೇಶ ಮತ್ತು ಬಿಹಾರ ಕ್ರಮವಾಗಿ 12,714 ಮತ್ತು 7,368 ಇಂತಹ ಅಪರಾಧಗಳಿಗೆ ಸಾಕ್ಷಿಯಾಗಿದೆ. ರಾಜಸ್ಥಾನದಲ್ಲಿ 7,017 ಪ್ರಕರಣಗಳು ಮತ್ತು ಮಧ್ಯಪ್ರದೇಶದಲ್ಲಿ 6,899 ಪ್ರಕರಣಗಳು ದಾಖಲಾಗಿವೆ.

2020 ರಲ್ಲಿ ಎಸ್‌ಸಿ ಮಹಿಳೆಯರಲ್ಲಿ 613 ಲೈಂಗಿಕ ದೌರ್ಜನ್ಯ ಪ್ರಕರಣಗಳು ಮತ್ತು 221 ಹಿಂಬಾಲಿಸುವ ಪ್ರಕರಣಗಳು ಕಂಡುಬಂದಿವೆ. ಇದರ ಜೊತೆಗೆ, ಈ ಸಮುದಾಯಗಳಿಗೆ ಸೇರಿದ ಮಕ್ಕಳ ಮೇಲೆ 336 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ದೇಶದಾದ್ಯಂತ 2019ಕ್ಕೆ ಹೋಲಿಸಿದರೆ 2020 ರಲ್ಲಿ ಪರಿಶಿಷ್ಟ ಪಂಗಡಗಳ (ಎಸ್ಟಿ) ಮೇಲೆ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ 9ರಷ್ಟು ಹೆಚ್ಚಳ ಕಂಡುಬಂದಿದೆ.

ಸೈಬರ್ ಅಪರಾಧಗಳು

2020 ರಲ್ಲಿ ಒಟ್ಟು 50,035 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, 2019ಕ್ಕೆ ಹೋಲಿಸಿದರೆ ಶೇ 11.8ರಷ್ಟು ಹೆಚ್ಚಳವಾಗಿದೆ. ಅವುಗಳಲ್ಲಿ 60.2% ಪ್ರಕರಣಗಳು ವಂಚನೆಗೆ ಸಂಬಂಧಿಸಿದ್ದಾಗಿದ್ದು 3,293 ಲೈಂಗಿಕ ಶೋಷಣೆ ಮತ್ತು 2,440 ಸುಲಿಗೆ ಪ್ರಕರಣಗಳಾಗಿವೆ.

ಉತ್ತರ ಪ್ರದೇಶ 11,097 ಸೈಬರ್ ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾದರೆ, ಕರ್ನಾಟಕದಲ್ಲಿ 2020ರಲ್ಲಿ 10,741 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 5,496 ಮತ್ತು 5,024 ಪ್ರಕರಣಗಳು ಕಂಡುಬಂದಿವೆ. 872 ಸೈಬರ್ ಬೆದರಿಕೆ ಅಥವಾ ಹಿಂಬಾಲಿಸುವಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಟಿಎಂ ವಂಚನೆಗಳಿಗೆ ಸಂಬಂಧಿಸಿದಂತ 2,160 ಪ್ರಕರಣಗಳು ನಡೆದಿದ್ದು, 4,047 ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಮತ್ತು ಒಟಿಪಿಗೆ ಸಂಬಂಧಿಸಿದ 1,093 ಅಪರಾಧಗಳು 2020ರಲ್ಲಿ ದಾಖಲಾಗಿವೆ.

ದತ್ತಂಶದ ವಿವರಗಳನ್ನು ಇಲ್ಲಿ ಓದಿ:

Attachment
PDF
Crime_Aganst_Women.pdf
Preview

Related Stories

No stories found.
Kannada Bar & Bench
kannada.barandbench.com