ಮಾದಕವಸ್ತು ಪ್ರಕರಣ: ಬಾಲಿವುಡ್‌ ನಟ ಸುಶಾಂತ್ ಸ್ನೇಹಿತ ಪಿಥಾನಿಗೆ ಬಾಂಬೆ ಹೈಕೋರ್ಟ್ ಜಾಮೀನು [ಚುಟುಕು]

Siddharth Pithani
Siddharth Pithani Pinkvilla

ಬಾಲಿವುಡ್‌ ನಟ ಮೃತ ಸುಶಾಂತ್‌ ಸಿಂಗ್‌ ರಜಪೂತ್‌ ಸ್ನೇಹಿತ, ಮಾಜಿ ರೂಂಮೇಟ್‌ ಸಿದ್ಧಾರ್ಥ್‌ ಪಿತಾನಿ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರು ₹ 50,000 ವೈಯಕ್ತಿಕ ಬಾಂಡ್ ಅನ್ನು ಒದಗಿಸುವ ವಿಷಯವಾಗಿ ಪಿಥಾನಿ ಅವರಿಗೆ ಜಾಮೀನು ನೀಡಿದರು.

ರಜಪೂತ್‌ ಸಾವಿಗೆ ಸಂಬಂಧಿಸಿದಂತೆ ಎನ್‌ಸಿಬಿ ನಡೆಸುತ್ತಿರುವ ಮಾದಕವಸ್ತು ಪ್ರಕರಣದಲ್ಲಿ ಪಿಥಾನಿ ಪ್ರಮುಖ ಆರೋಪಿ. ಮುಂಬೈನ ವಿಶೇಷ ನ್ಯಾಯಾಲಯವು ಡೀಫಾಲ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಪಿಥಾನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ

Related Stories

No stories found.
Kannada Bar & Bench
kannada.barandbench.com