[ಚುಟುಕು] ಎನ್‌ಡಿಪಿಎಸ್‌ ಪ್ರಕರಣ: ಸಮೀರ್‌ ವಿರುದ್ಧ ಆರೋಪ ಮಾಡಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್‌

Sameer Wankhede, Mumbai sessions court

Sameer Wankhede, Mumbai sessions court

ಎನ್‌ಸಿಬಿಯ ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಸಾಕ್ಷ್ಯಾಧಾರ ತಿರುಚಿದ ಆರೋಪ ಮಾಡಿದ್ದ ಮಾದಕವಸ್ತು ಪ್ರಕರಣದ ಆರೋಪಿ ಜೈದ್‌ ರಾಣಾ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿದೆ. ವಾಂಖೆಡೆ ಅವರು ಆರ್ಯನ್ ಖಾನ್ ಪ್ರಕರಣದಲ್ಲಿ ಮಾಡಿದಂತೆ ತಮ್ಮ ವಿರುದ್ಧ ಸುಳ್ಳು ಪುರಾವೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಜೈದ್ ರಾಣಾ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದರು. ರಾಣಾ ದೂರವಾಣಿ ಸಂಭಾಷಣೆ ಮತ್ತು ಆತನಿಂದ ವಶಪಡಿಸಿಕೊಂಡಿರುವ ಮಾದಕವಸ್ತುವಿನ ಪ್ರಮಾಣ ಗಮನಿಸಿದರೆ ಕೃತ್ಯದಲ್ಲಿ ಅವರ ಪಾತ್ರ ನಿರಾಕರಿಸುವಂಥದ್ದಲ್ಲ ಎಂದು ವಿಶೇಷ ನ್ಯಾಯಾಧೀಶ ಎ ಎ ಜೋಗಳೇಕರ್‌ ಅಭಿಪ್ರಾಯಪಟ್ಟರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com