ಸಾಮಾಜಿಕ ನ್ಯೂನತೆ ಹೋಗಲಾಡಿಸಬೇಕಿದ್ದರೂ ಮೀಸಲಾತಿಯು ಸಮಾನತೆ ತರುತ್ತದೆಯೇ ಎಂಬುದು ಅಸ್ಪಷ್ಟ: ನ್ಯಾ. ಸುಜಾತಾ ಮನೋಹರ್

ಇವು ಪರಿಹರಿಸಲು ಕಷ್ಟಕರವಾದ ಸಮಸ್ಯೆಗಳಾಗಿದ್ದು, ಸಾಮಾಜಿಕ ನ್ಯೂನತೆ ತೊಡೆದುಹಾಕಲು ಸಂಶೋಧನೆ ಮತ್ತು ಯೋಜನೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
The First Shiv Kumar Suri Memorial Lecture
The First Shiv Kumar Suri Memorial Lecture

ಹಿಂದುಳಿದ ಸಮುದಾಯಗಳ ಸಾಮಾಜಿಕ ನ್ಯೂನತೆಗಳನ್ನು ತೊಡೆದುಹಾಕುವ ಅವಶ್ಯಕತೆ ಇದೆಯಾದರೂ ಕೋಟಾ ವ್ಯವಸ್ಥೆ ಅಥವಾ ಮೀಸಲಾತಿಯು ಸಮಾನತೆಯನ್ನು ತರಲು ಸಹಾಯ ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಜಾತಾ ಮನೋಹರ್ ಈಚೆಗೆ ತಿಳಿಸಿದ್ದಾರೆ.

ಕೋಟಾಗಳು ಮತ್ತು ದೃಢಕ್ರಮಗಳನ್ನು ಭಾರತದಲ್ಲಿ ಕೈಗೊಂಡಿದ್ದರೂ ಇವು ಪ್ರಸ್ತುತ ಸನ್ನಿವೇಶವನ್ನು ಸಮಾನವಾಗಿಸುತ್ತವೆಯೇ ಎಂಬುದು ಅಸ್ಪಷ್ಟ ಎಂದು ಅವರು ಹೇಳಿದರು.

ಇವು ಪರಿಹರಿಸಲು ಕಷ್ಟಕರವಾದ ಸಮಸ್ಯೆಗಳಾಗಿದ್ದು, ಸಾಮಾಜಿಕ ನ್ಯೂನತೆಗಳನ್ನು ತೊಡೆದುಹಾಕಲು ಸಂಶೋಧನೆ ಮತ್ತು ಯೋಜನೆಗಳನ್ನು ಕೈಗೊಳ್ಳುವ ಅಗತ್ಯವಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ಪರಿಹಾರಗಳಿಲ್ಲ ಎಂದು ಅವರು ಹೇಳಿದರು.

ನವದೆಹಲಿಯ ಭಾರತ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಸೆಪ್ಟೆಂಬರ್ 7 ರಂದು ನಡೆದ  ಶಿವಕುಮಾರ್ ಸೂರಿ ಸ್ಮಾರಕ ಪ್ರಥಮ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಸಂಗಿಕವಾಗಿ ಹಕ್ಕುಗಳು ಅಂತರ್ಗತ ವ್ಯತಿರಿಕ್ತತೆಯಿಂದ ಕೂಡಿವೆ ಎಂದು ನ್ಯಾ. ಮನೋಹರ್‌ ತಿಳಿಸಿದರು. ಇಬ್ಬರು  ಮನುಷ್ಯರು ಸಮಾನರಲ್ಲವಾದ್ದರಿಂದ ಸಮಾನತೆಯ ಹಕ್ಕನ್ನು ಅರ್ಥೈಸುವಲ್ಲಿ ಮೂಲಭೂತ ಸಮಸ್ಯೆ ಇದೆ ಎಂದು ಅವರು ಹೇಳಿದರು.

Also Read
ನ್ಯಾಯಾಂಗ ಸೇವೆ, ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಶೇ 10ರಷ್ಟು ಮೀಸಲಾತಿ ಘೋಷಿಸಿದ ಬಿಹಾರ ಸರ್ಕಾರ

ಶಬರಿಮಲೆ ಪ್ರಕರಣ ಮತ್ತು ಶಾಯೆರಾ ಬಾನೋ ಪ್ರಕರಣ (ತ್ರಿವಳಿ ತಲಾಖ್ ಪ್ರಕರಣ)ವನ್ನು ಉಲ್ಲೇಖಿಸಿದ ಅವರು ಲಿಂಗ ತಾರತಮ್ಯವನ್ನು ನಿಭಾಯಿಸಯವಲ್ಲಿ ಅದರಲ್ಲಿಯೂ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿಗೊಳಿಸುವಲ್ಲಿ ತೊಂದರೆಗಳಿವೆ ಎಂದರು.

ಅಂತಹ ಕಾನೂನುಗಳನ್ನು ಬದಲಾಯಿಸುವುದು ಅಥವಾ ಕೌಟುಂಬಿಕ ಕಾನೂನಿನಲ್ಲಿ ಪುರುಷರು ಮತ್ತು ಮಹಿಳೆಯರ ಹಕ್ಕುಗಳನ್ನು ಸಮಾನಗೊಳಿಸುವುದು ಎಷ್ಟು ಕಷ್ಟ ಎಂಬುದನ್ನು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)  ಕುರಿತಾಗಿ ಪ್ರಸ್ತುತ ನಡೆಯುತ್ತಿರುವ ಚರ್ಚೆ ಸೂಚಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅನಿಲ್ ಆರ್ ದವೆ, ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದೀಶ್ ಸಿ ಅಗರ್ವಾಲಾ ಮತ್ತು ವಕೀಲ ಶಿವಕುಮಾರ್ ಸೂರಿ ಅವರ ಪುತ್ರ ಶಿಖಿಲ್ ಸೂರಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com