ನಾಲ್ಕು ವಾರಗಳಲ್ಲಿ ನೀಟ್- ಎಂಡಿಎಸ್ ಕೌನ್ಸೆಲಿಂಗ್: ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಸುಪ್ರೀಂಕೋರ್ಟ್ ಕಳೆದ ವಿಚಾರಣೆ ವೇಳೆ ತಿಳಿಸಿದಂತೆ ತಾನು ಯಾವುದೇ ವಿಳಂಬ ಧೋರಣೆ ಅನುಸರಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಾಲ್ಕು ವಾರಗಳಲ್ಲಿ ನೀಟ್- ಎಂಡಿಎಸ್ ಕೌನ್ಸೆಲಿಂಗ್: ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಈಗ ಇರುವ ಮೀಸಲಾತಿ ನೀತಿಗಳಿಗೆ ಅನುಗುಣವಾಗಿ ನಾಲ್ಕು ವಾರದೊಳಗೆ 2020ನೇ ಸಾಲಿನ ನೀಟ್- ಎಂಡಿಎಸ್ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನ್ಯಾಯಾಲಯ ಕಳೆದ ವಿಚಾರಣೆ ವೇಳೆ ತಿಳಿಸಿದಂತೆ ಯಾವುದೇ ವಿಳಂಬ ಧೋರಣೆ ಅನುಸರಿಸಿಲ್ಲ ಎಂದು ಕೇಂದ್ರ ಸರ್ಕಾರ ಇದೇ ವೇಳೆ ಸ್ಪಷ್ಟಪಡಿಸಿದೆ.

ಎಐಕ್ಯೂ (ಅಖಿಲ ಭಾರತ ಕೋಟಾ) ಯೋಜನೆಯಡಿ ರಾಜ್ಯ ವೈದ್ಯಕೀಯ ಕಾಲೇಜುಗಳು ನೀಡುವ ಅಖಿಲ ಭಾರತ ಕೋಟಾ (ಎಐಕ್ಯು) ಸ್ಥಾನಗಳಿಗೆ ಒಬಿಸಿ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟನೆ ಕೇಳಿದ್ದರಿಂದಾಗಿ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಅನಿರೀಕ್ಷಿತ ವಿಳಂಬ ಉಂಟಾಯಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Also Read
ನೀಟ್‌ ನಂತರ ತಮಿಳುನಾಡಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯಕ್ಕೆ ಇಳಿಕೆ

ಆರೋಗ್ಯ ಸೇವೆಗಳ ಮಹಾನಿರ್ದೇಶಕರ ವಿರುದ್ಧ ಸಲೋನಿ ಕುಮಾರಿ ಅವರು ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಅಲ್ಲದೆ ಅಖಿಲ ಭಾರತ ಕೋಟಾದಡಿ ಶೇ 27ರಷ್ಟು ಒಬಿಸಿ ಮೀಸಲಾತಿ ಕೋರಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಹಲವು ರಿಟ್‌ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಸಲೋನಿ ಕುಮಾರಿ ಪ್ರಕರಣದಲ್ಲಿ ಸರ್ಕಾರ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದೆ, ಆದರೆ ಅದನ್ನು ಇನ್ನೂ ದಾಖಲೆಯಲ್ಲಿ ಪರಿಗಣಿಸದೇ ಇರುವುದರಿಂದ ಕೌನ್ಸೆಲಿಂಗ್‌ ನಡೆಸಲು ಅಡ್ಡಿಯಾಗಿದೆ ಎಂದು ಹೇಳಲಾಗಿದೆ.

ನೀಟ್‌-ಎಂಡಿಎಸ್‌- 2021 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (ಎಂಸಿಸಿ) ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸುವಲ್ಲಿ ತೋರಿರುವ “ಅನ್ಯಾಯಯುತ ಮತ್ತು ಅನಿಯಮಿತ ವಿಳಂಬದ” ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ನೀಟ್‌-ಎಂಡಿಎಸ್‌ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. 2020ರ ಡಿಸೆಂಬರ್ 16 ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಮನವಿ ತಿಳಿಸಿತ್ತು. ಅದರ ನಂತರ 2020ರ ಡಿಸೆಂಬರ್ 31ರಂದು ಫಲಿತಾಂಶಗಳನ್ನು ಸಹ ಘೋಷಿಸಲಾಯಿತು. ಆದರೆ, ಫಲಿತಾಂಶಗಳ ಘೋಷಣೆಯ ನಂತರ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com