ಭಾರತದ ಕಲ್ಪನೆಯನ್ನು ಎಂದಿಗೂ ವಿರೂಪಗೊಳಿಸಲು ಬಿಡದಿರಿ: ನ್ಯಾ. ಅಕಿಲ್ ಕುರೇಶಿ ಮನವಿ

ತಾವು ಪ್ರಾಯದವರಿದ್ದಾಗ ರಾಷ್ಟ್ರೀಯತೆ ಇನ್ನೂ ಪ್ರಚಲಿತದಲ್ಲಿತ್ತು. ಆದರೆ ಕಡೆಗೆ ಆಧುನಿಕ, ಉದಾರ ಹಾಗೂ ವೈಜ್ಞಾನಿಕ ದೃಷ್ಟಿಕೋನ ಇರುವ ಭಾರತದ ಪರಿಕಲ್ಪನೆ ಹೊರಹೊಮ್ಮಿತು ಎಂದು ಅವರು ನೆನೆದರು.
Justice Akil Kureshi
Justice Akil Kureshi

ಭಾರತದ ಕಲ್ಪನೆ ವಿವಿಧತೆಯಲ್ಲಿ ಏಕತೆ ಹೊಂದಿದ್ದು ಅದನ್ನು ರಕ್ಷಿಸುವ ಅಗತ್ಯವಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಕಿಲ್‌ ಕುರೇಶಿ ಭಾನುವಾರ ತಿಳಿಸಿದರು.

ತಮಿಳುನಾಡಿನ ನಿವೃತ್ತ ಅಡ್ವೊಕೇಟ್ ಜನರಲ್ ಮತ್ತು ಪ್ರಸಿದ್ಧ ವಕೀಲ ಎಸ್‌ ಗೋವಿಂದನ್‌ ಅವರ ಸ್ಮರಣಾರ್ಥ ದ ಜ್ಯೂನಿಯರ್ಸ್‌ ಆಫ್‌ ಮಿಸ್ಟರ್‌ ಎಸ್‌ ಗೋವಿಂದನ್‌ ಸಂಘಟನೆ ಭಾನುವಾರ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ʼವಕೀಲ ವೃತ್ತಿಯಲ್ಲಿ ನೈತಿಕತೆಗಾಗಿ ಎಸ್‌ಜಿಎಸ್ ಪ್ರಶಸ್ತಿʼ ಸ್ವೀಕರಿಸಿ ಅವರು ಮಾತನಾಡಿದರು.

ತಾವು ಪ್ರಾಯದವರಿದ್ದಾಗ ರಾಷ್ಟ್ರೀಯತೆ ಇನ್ನೂ ಪ್ರಚಲಿತದಲ್ಲಿತ್ತು. ಅದರೆ ಕಡೆಗೆ ಆಧುನಿಕ, ಉದಾರ ಹಾಗೂ ವೈಜ್ಞಾನಿಕ ದೃಷ್ಟಿಕೋನ ಇರುವ ಭಾರತದ ಪರಿಕಲ್ಪನೆ ಹೊರಹೊಮ್ಮಿತು ಎಂದು ಅವರು ನೆನೆದರು.

“ಇಂದಿನ ಭಾರತದಲ್ಲಿ ವಿವಿಧತೆಯಲ್ಲಿ ವಿಶ್ವವಿದ್ಯಾಲಯಗಳಿರಬೇಕು ಎಂಬುದು ಏಕತೆಯಷ್ಟೇ ಮುಖ್ಯವಾಗಿದೆ.  ಭಾರತದ ಈ ಕಲ್ಪನೆಯನ್ನು ಎಂದಿಗೂ ವಿರೂಪಗೊಳಿಸಬಾರದು ಎಂದು ನಾನು ಕಾನೂನು ವಿದ್ಯಾರ್ಥಿಗಳನ್ನು ಕೇಳಿಕೊಳ್ಳುವೆ” ಎಂದು ಅವರು ನುಡಿದರು.

"ನಾನು ನ್ಯಾಯಾಧೀಶನಾದಾಗ, ʼಅವರೊಬ್ಬ ಶ್ರೇಷ್ಠ ನ್ಯಾಯಾಧೀಶ ಎಂದು ಜನ ಮಾತನಾಡಿಕೊಳ್ಳದಿದ್ದರೂ ಅವರು ನೈತಿಕ ಮತ್ತು ಮುಕ್ತ ನ್ಯಾಯಾಧೀಶರಾಗಿದ್ದರು ಎಂದು ಹೇಳಿಕೊಳ್ಳುವಂತೆ ಅಧಿಕಾರದಿಂದ ನಿರ್ಗಮಿಸುವವರೆಗೂ ನಡೆದುಕೊಳ್ಳುವುದಾಗಿ ನನಗೆ ನಾನೇ ಪ್ರಮಾಣ ಮಾಡಿಕೊಂಡಿದ್ದೆ” ಎಂಬುದಾಗಿ ಅವರು ಹೇಳಿದರು.  

ಒಬ್ಬರನ್ನು ಕೊಲಿಜಿಯಂ ಯಾಕೆ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಿಲ್ಲ ಎಂದು ಕಾರಣ ನೀಡುವುದನ್ನು ನಾನು ವಿರೋಧಿಸುತ್ತೇನೆ. ಈ ಕಾರಣಗಳನ್ನು ಬಹಿರಂಗಪಡಿಸಿದರೆ ವಕೀಲರು ಹೇಗೆ ಪ್ರಾಕ್ಟೀಸ್‌ ಮುಂದುವರೆಸಬಲ್ಲರು ಎಂಬುದನ್ನು ಊಹಿಸಿಕೊಳ್ಳಿ” ಎಂದರು.

ಎಲ್ಲಾ ಅಂಶಗಳನ್ನು ಗ್ರಹಿಸಲು ಮೂರು ಅಥವಾ ಐವರು ನ್ಯಾಯಮೂರ್ತಿಗಳ ಕೊಲಿಜಿಯಂ ಸಮೂಹ ಸಾಲದು. ಇದನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ವ್ಯವಸ್ಥೆ ಹೊರಹೊಮ್ಮಲು ನಿವೃತ್ತ ನ್ಯಾಯಮೂರ್ತಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಚುನಾವಣಾ ರಾಜಕೀಯದ ಹಿನ್ನೆಲೆ ಹೊಂದಿರುವವರನ್ನು ಆಹ್ವಾನಿಸುವ ಕಾರ್ಯವಿಧಾನ ರೂಪುಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಮತ್ತು ಸಹಜೀವನ ಪ್ರಕರಣಗಳಲ್ಲಿ ರಕ್ಷಣೆ ಒದಗಿಸಲು ಅನೈತಿಕತೆ ಆಧಾರದಲ್ಲಿ ನ್ಯಾಯಾಲಯಗಳು ಹಿಂದೇಟು ಹಾಕುತ್ತಿರುವುದು ಕಳವಳಕಾರಿ ಎಂದ ಅವರು ಸಮಾಜ ತಿರುಗೇಟು ನೀಡುತ್ತದೆ ಎಂಬ ನಂಬಿಕೆ ಇರುವುದರಿಂದ ತಮ್ಮ ಕಳವಳಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದರು.

"ಒಳ್ಳೆಯ ಜೀವನ ನಡೆಸಿದ್ದೇವೆಯೇ ಎಂದು ನಾವೆಲ್ಲರೂ ನಮ್ಮನ್ನು ಕೇಳಿಕೊಳ್ಳಬೇಕು ಮತ್ತು ಉತ್ತರ ತಮ್ಮಿಂದ ಬಾರದೆ ಬೇರೆಯವರಿಂದ ಬರಬೇಕು" ಎಂದು ಅವರು ಹೇಳಿದರು.

Related Stories

No stories found.
Kannada Bar & Bench
kannada.barandbench.com