ದೇಶದ ಆರು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಈ ನೇಮಕಾತಿಗಳನ್ನು ಮೇ 17, 2022ರಂದು ಶಿಫಾರಸ್ಸು ಮಾಡಿತ್ತು.
Justices Vipin Sanghi, Ujjal Bhuyan, AA Syed, RM Chhaya and SS Shinde.
Justices Vipin Sanghi, Ujjal Bhuyan, AA Syed, RM Chhaya and SS Shinde.
Published on

ದೇಶದ ವಿವಿಧ ಹೈಕೋರ್ಟ್‌ಗಳಿಗೆ ಆರು ಮಂದಿ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದ ಆರು ಮಂದಿ ನ್ಯಾಯಮೂರ್ತಿಗಳ ವಿವರ ಹೀಗಿದೆ:

ನ್ಯಾ. ವಿಪಿನ್ ಸಾಂಘಿ (ಪ್ರಸ್ತುತ ದೆಹಲಿ ಹೈಕೋರ್ಟ್‌) - ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆ

ನ್ಯಾ. ಸತೀಶ್‌ ಚಂದ್ರ ಶರ್ಮಾ (ಪ್ರಸ್ತುತ ತೆಲಂಗಾಣ ಹೈಕೋರ್ಟ್‌) - ದೆಹಲಿ ಹೈಕೋರ್ಟ್‌

ನ್ಯಾ. ಎ ಎ ಸಯೀದ್‌ (ಪ್ರಸ್ತುತ ಬಾಂಬೆ ಹೈಕೋರ್ಟ್‌) - ಹಿಮಾಚಲ ಪ್ರದೇಶ ಹೈಕೋರ್ಟ್‌

ನ್ಯಾ. ಎಸ್‌ ಎಸ್‌ ಶಿಂಧೆ (ಪ್ರಸ್ತುತ ಬಾಂಬೆ ಹೈಕೋರ್ಟ್‌) - ರಾಜಸ್ಥಾನ ಹೈಕೋರ್ಟ್‌

ನ್ಯಾ. ರಶ್ಮಿ ಎಂ ಛಾಯಾ (ಪ್ರಸ್ತುತ ಗುಜರಾತ್‌) - ಗೌಹಾಟಿ ಹೈಕೋರ್ಟ್‌

ನ್ಯಾ. ಉಜ್ಜಲ್‌ ಭುಯನ್‌ (ಪ್ರಸ್ತುತ ತೆಲಂಗಾಣ) - ತೆಲಂಗಾಣ ಹೈಕೋರ್ಟ್‌

Chief Justice Satish Chandra Sharma
Chief Justice Satish Chandra Sharma

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಈ ನೇಮಕಾತಿಗಳನ್ನು ಮೇ 17, 2022ರಂದು ಶಿಫಾರಸ್ಸು ಮಾಡಿತ್ತು. ಮುಂದಿನ ಕ್ರಮವಾಗಿ ಕೇಂದ್ರ ಸರ್ಕಾರವು ಜೂನ್‌ 19ರಂದು ನೇಮಕಾತಿ ಆದೇಶವನ್ನು ಹೊರಡಿಸಿದೆ.

Kannada Bar & Bench
kannada.barandbench.com