ಕೆಳ ನ್ಯಾಯಾಲಯ, ನ್ಯಾಯಮಂಡಳಿಗಳ ಪ್ರತಿ ಪ್ರಕರಣದ ಮೇಲ್ಮನವಿ ಸರ್ವೋಚ್ಚ ನ್ಯಾಯಾಲಯಕ್ಕೆ: ಸುಪ್ರೀಂ ಬೇಸರ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶಗಳ ವಿರುದ್ಧ ಶಾಸನಬದ್ಧ ಮೇಲ್ಮನವಿಗಳನ್ನು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ಶಾಸಕಾಂಗವು ಅವಕಾಶ ಮಾಡಿರುವುದು "ದಡ್ಡತನ" ಎಂದ ಸುಪ್ರೀಂ ಕೋರ್ಟ್‌.
NGT
NGT
Published on

ಕೆಳ ನ್ಯಾಯಾಲಯ, ನ್ಯಾಯಮಂಡಳಿಗಳ ಪ್ರತಿಯೊಂದು ಪ್ರಕರಣವೂ ಉನ್ನತ ನ್ಯಾಯಾಲಯಕ್ಕೆ ಬರುತ್ತಿರುವ ಸಂಬಂಧ ವಿಷಾದ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶಗಳ ವಿರುದ್ಧ ಶಾಸನಬದ್ಧ ಮೇಲ್ಮನವಿಗಳನ್ನು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ಶಾಸಕಾಂಗವು ಅವಕಾಶ ಮಾಡಿರುವುದು "ದಡ್ಡತನ" ಎಂದು ಮಂಗಳವಾರ ತನ್ನ ಅಸಮಾಧಾನ ಹೊರಹಾಕಿತು.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಈ ಹಂತದಲ್ಲಿ “ಶಾಸನಬದ್ಧ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಅವಕಾಶ ಒದಗಿಸುವುದು ಶಾಸಕಾಂಗದ ಅಧಿಕಾರ” ಎಂದು ಪ್ರತಿಪಾದಿಸಿದರು. ಅಲ್ಲದೆ, ಹಸಿರು ನ್ಯಾಯಮಂಡಳಿ ರೀತಿಯ ಮಂಡಳಿಗಳು ತಾಂತ್ರಿಕ ವಿಷಯ ಪರಿಣತಿ ಹೊಂದಿರುವಂಥವಾಗಿದ್ದು ಅವುಗಳ ಹೈಕೋರ್ಟ್‌ಗೆ ಸಮನಾಗಿರುತ್ತವೆ ಎಂದರು. ಆ ಮೂಲಕ ಅಲ್ಲಿನ ಪ್ರಕರಣಗಳನ್ನು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಲ್ಪಿಸಿರುವ ಅವಕಾಶವನ್ನು ಸಮರ್ಥಿಸಿದರು.

ಹಸಿರು ನ್ಯಾಯಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಎನ್‌ಜಿಟಿ ಕಾಯಿದೆಯ ಸೆಕ್ಷನ್ 3ನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com