ಅಸಮರ್ಪಕ ತ್ಯಾಜ್ಯ ನಿರ್ವಹಣೆ: ₹3,000 ಕೋಟಿ ಪರಿಹಾರ ನೀಡುವಂತೆ ರಾಜಸ್ಥಾನ ಸರ್ಕಾರಕ್ಕೆ ಎನ್‌ಜಿಟಿ ಆದೇಶ

ಅಸಮರ್ಪಕ ತ್ಯಾಜ್ಯ ನಿರ್ವಹಣೆ: ₹3,000 ಕೋಟಿ ಪರಿಹಾರ ನೀಡುವಂತೆ ರಾಜಸ್ಥಾನ ಸರ್ಕಾರಕ್ಕೆ ಎನ್‌ಜಿಟಿ ಆದೇಶ
A1

ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಮಾಡಿದ ರಾಜಸ್ಥಾನ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಗುರುವಾರ ಪರಿಸರ ಪರಿಹಾರವಾಗಿ ₹ 3,000 ಕೋಟಿ ಪಾವತಿಸಲು ನಿರ್ದೇಶಿಸಿದೆ [ಪುರಸಭೆಯ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2016 ಮತ್ತು ಇತರ ಪರಿಸರ ಸಮಸ್ಯೆಗಳ ಅನುಸರಣೆ ಕುರಿತ ಸ್ವಯಂಪ್ರೇರಿತ ಅರ್ಜಿ].

ಎನ್‌ಜಿಟಿ ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ಪರಿಸರಕ್ಕೆ ನಿರಂತರ ಹಾನಿ ತಪ್ಪಿಸಲು ಪರಿಹಾರ ಒದಗಿಸುವುದು ಅಗತ್ಯ ಎಂದು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್ನ್ಯಾ. ಸುಧೀರ್ ಅಗರ್ವಾಲ್ ತಜ್ಞ ಸದಸ್ಯ ಪ್ರೊ. ಸೆಂಥಿಲ್‌ ವೇಲ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಎಡವಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ₹ 12,000 ಕೋಟಿ ಪರಿಹಾರ ನೀಡುವಂತೆ ಎನ್‌ಜಿಟಿ ಇತ್ತೀಚೆಗೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com