ಪ್ರವಾಸೋದ್ಯಮದಿಂದ ಹಿಮಾಲಯಕ್ಕೆ ಹಾನಿ: ಸ್ವಯಂಪ್ರೇರಿತ ವಿಚಾರಣೆ ನಡೆಸಲಿರುವ ಎನ್‌ಜಿಟಿ [ಚುಟುಕು]

ಪ್ರವಾಸೋದ್ಯಮದಿಂದ ಹಿಮಾಲಯಕ್ಕೆ ಹಾನಿ: ಸ್ವಯಂಪ್ರೇರಿತ ವಿಚಾರಣೆ ನಡೆಸಲಿರುವ ಎನ್‌ಜಿಟಿ [ಚುಟುಕು]
A1

ಎಗ್ಗಿಲ್ಲದ ಪ್ರವಾಸೋದ್ಯಮ ಚಟುವಟಿಕೆಗಳಿಂದಾಗಿ ಹಿಮಾಲಯಕ್ಕೆ ಆಗಿರುವ ಹಾನಿಯನ್ನು ವಿವರಿಸುವ ಮಾಧ್ಯಮ ವರದಿಯೊಂದನ್ನು ಆಧರಿಸಿ ನವದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ( ಎನ್‌ಜಿಟಿ ) ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ. "ಪ್ರವಾಸೋದ್ಯಮ ಹಿಮಾಲಯ ಪ್ರದೇಶಕ್ಕೆ ಆರ್ಥಿಕ ಸಮೃದ್ಧಿಯನ್ನು ತಂದಿದೆ. ಆದರೆ ಪರಿಸರ ಹಾನಿ ದುರಂತಕ್ಕೆ ಕಾರಣವಾಗುತ್ತದೆ" ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿತ್ತು. ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ ನ್ಯಾ,. ಎ ಕೆ ಗೋಯೆಲ್‌ ನೇತೃತ್ವದ ಪೀಠ 3 ತಿಂಗಳೊಳಗೆ ವರದಿ ಸಲ್ಲಿಸುವಂತೆ ʼಜಿಬಿ ಪಂತ್ ರಾಷ್ಟ್ರೀಯ ಹಿಮಾಲಯ ಪರಿಸರ ಸಂಸ್ಥೆʼಗೆ ಸೂಚಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com