ಗ್ರಂಥಾಲಯ ಡಿಜಿಟಲೀಕರಣದತ್ತ ಹೆಜ್ಜೆ ಇರಿಸಿದ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ [ಚುಟುಕು]

NLSIU

NLSIU

ಬೆಂಗಳೂರಿನ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ ತನ್ನ ಗ್ರಂಥಾಲಯವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ತಯಾರಿ ನಡೆಸುತ್ತಿದೆ. ಸುಮಾರು 40,000 ಪುಸ್ತಕಗಳು, 30,000 ಜರ್ನಲ್‌ಗಳು ಹಾಗೂ ರಿಪೋರ್ಟ್‌ಗಳನ್ನು ಒಳಗೊಂಡ ಇದು ದೇಶದ ಅತಿದೊಡ್ಡ ಗ್ರಂಥಾಲಯಗಳಲ್ಲೊಂದಾಗಿದೆ.

ಡಿಜಿಟಲೀಕರಣದಿಂದ ವಿದ್ಯಾರ್ಥಿಗಳು ಗ್ರಂಥ ಮತ್ತಿತರ ಮಾಹಿತಿಯನ್ನು ವಿಫುಲವಾಗಿ ಅಧ್ಯಯನ ಮಾಡುವುದಕ್ಕೆ ಅನುಕೂಲವಾಗುತ್ತದೆ ಮಾತ್ರವಲ್ಲದೆ ಪೈರಸಿ ತಡೆಯಲು ಮತ್ತು ಇತರ ಸಂಸ್ಥೆಗಳು ಇದನ್ನು ಅನುಸರಿಸಲು ಮಾದರಿಯಾಗಲಿದೆ. ವಿವಿಧ ಹಂತಗಳಲ್ಲಿ ನಡೆಯಲಿರುವ ಡಿಜಿಟಲೀಕರಣ ಪ್ರಕ್ರಿಯೆ ಇನ್ನು 12-18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂಬುದಾಗಿ ಕಾನೂನು ಶಾಲೆಯ ಉಪ ಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com