ಎನ್‌ಎಲ್‌ಎಸ್‌ಐಯು ತಿದ್ದುಪಡಿ ಕಾಯ್ದೆಗೆ ಮಧ್ಯಂತರ ತಡೆ ನೀಡಿದ ರಾಜ್ಯ ಹೈಕೋರ್ಟ್ : ಹೊಸ ಪಟ್ಟಿ ಸಿದ್ಧಪಡಿಸಲು ಸೂಚನೆ

ಸೀಟುಗಳ ಸಂಖ್ಯೆಯನ್ನು 80 ರಿಂದ 120 ಕ್ಕೆ ಹೆಚ್ಚಿಸುವ ಸಂಬಂಧ ಯಾವುದೇ ಮಧ್ಯಂತರ ಆದೇಶ ಜಾರಿಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
NLSIU
NLSIU

ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸುವ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) 2020ರ ತಿದ್ದುಪಡಿ ಕಾಯ್ದೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠ ಹೊಸ ಸೀಟುಗಳ ಪಟ್ಟಿ ಸಿದ್ಧಪಡಿಸುವಂತೆಯೂ ಎನ್‌ಎಲ್‌ಎಸ್‌ಐಯುಗೆ ನಿರ್ದೇಶನ ನೀಡಿದೆ. ಆದರೆ, ಸೀಟುಗಳ ಸಂಖ್ಯೆಯನ್ನು 80 ರಿಂದ 120 ಕ್ಕೆ ಹೆಚ್ಚಿಸುವ ಸಂಬಂಧ ಯಾವುದೇ ಮಧ್ಯಂತರ ಆದೇಶ ಜಾರಿಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ಎನ್‌ಎಲ್‌ಎಸ್‌ಐಯು ಸಿದ್ಧಪಡಿಸಿದ ಪ್ರವೇಶ ಪಟ್ಟಿ ತಾತ್ಕಾಲಿಕ ಮತ್ತು ನ್ಯಾಯಾಲಯದ ಅಂತಿಮ ಆದೇಶಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

"ಈ ಅರ್ಜಿಗಳನ್ನು ವಿಲೇವಾರಿಯವರೆಗೆ ಆಕ್ಷೇಪಿತ ತಿದ್ದುಪಡಿ ಕಾಯ್ದೆಯಡಿ, ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟುಗಳನ್ನು ಸಮಾನಾಂತರವಾಗಿ ಕಾಯ್ದಿರಿಸಿರುವಂತೆ ಯಾವುದೇ ರೀತಿಯ ಸೂಚನೆಗಳನ್ನು ಅಥವಾ ಪ್ರಕಟಣೆಗಳನ್ನು ನೀಡುವಂತಿಲ್ಲ," ಎಂದು ಕೋರ್ಟ್ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com