
-
2027ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಮಧ್ಯಮ ಮತ್ತು ದೀರ್ಘಾವಧಿಯ ಸುಧಾರಣೆಗಾಗಿ ಸಾರ್ವಜನಿಕರು ಸಲಹೆ, ಪ್ರತಿಕ್ರಿಯೆ ನೀಡವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಕೋರಿದೆ.
ನ್ಯಾ. ಇಂದು ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ 4ನೇ ಸಲಹಾ ಮಂಡಳಿ ಸಭೆ, ಪ್ರಸ್ತಾವಿತ ಸುಧಾರಣೆಗಳನ್ನು ಸೂಚಿಸಲು ಸ್ವತಂತ್ರ ಶೈಕ್ಷಣಿಕ ತಜ್ಞರ ಸಮಿತಿಯನ್ನು ರಚಿಸಿತು.
ಸಮಿತಿಯಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಹಿಲ್ಡಾ ಕಾಲೇಜಿನ ಕಾನೂನು ಪ್ರಾಧ್ಯಾಪಕ ಪ್ರೊ. ದೇವ್ ಸೈಫ್ ಗಂಗ್ಜೀ; ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ಕಾನೂನು ಶಾಲೆಯಲ್ಲಿ ಸಾರ್ವಜನಿಕ ಕಾನೂನು ಬೋಧಿಸುವ ಪ್ರಾಧ್ಯಾಪಕ ಪ್ರೊ. ತರುಣಭ್ ಖೈತಾನ್; ಕೊಲಂಬಿಯಾ ಕಾನೂನು ಶಾಲೆಯ ಕಾನೂನು ಪ್ರಾಧ್ಯಾಪಕ ಪ್ರೊ. ಶ್ಯಾಮಕೃಷ್ಣ ಬಾಲಗಣೇಶ್; ಬಿಎಂಎಲ್ ಮುಂಜಾಲ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಪ್ರೀತಮ್ ಬರುವಾ; ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕಾನೂನು ಪ್ರಾಧ್ಯಾಪಕ ಪ್ರೊ. ಸುರಭಿ ರಂಗನಾಥನ್ ಇದ್ದಾರೆ.
ಪ್ರಶ್ನೆಯ ಗುಣಮಟ್ಟ, ಪ್ರಶ್ನೆಪತ್ರಿಕೆಯ ಸ್ವರೂಪ, ಪ್ರವೇಶ ಪರೀಕ್ಷೆಯ ಪಠ್ಯಕ್ರಮ ಹಾಗೂ ಅಮೆರಿಕದ ಎಲ್ಎಸ್ಎಟಿ, ಇಂಗ್ಲೆಂಡ್ನ ಎಲ್ಎನ್ಎಟಿ ಪ್ರವೇಶಪರೀಕ್ಷೆಗಳೊಂದಿಗೆ ತುಲನೆ ಮಾಡುವುದು ಸಮಿತಿಯ ಗುರಿಯಾಗಿದೆ. ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ನವೆಂಬರ್ 4, 2025ರವರೆಗೆ ಸ್ವೀಕರಿಸಲಾಗುತ್ತದೆ.