ಕೋವಿಡ್ ಅಥವಾ ಕೌಟುಂಬಿಕ ಸಾವಿನ ಕಾರಣ ಹೊರತುಪಡಿಸಿ ಪ್ರಕರಣ ಮುಂದೂಡಲು ಕೋರುವಂತಿಲ್ಲ: ವಕೀಲರಿಗೆ ನ್ಯಾ. ಚಂದ್ರಚೂಡ್

Justice DY Chandrachud
Justice DY Chandrachud
Published on

ನ್ಯಾಯಾಲಯದ ಸಮಯ ಅಮೂಲ್ಯವಾದುದು ಎಂಬುದನ್ನು ಅರಿತು ಸುಪ್ರೀಂ ಕೋರ್ಟ್‌ ವಕೀಲರು ಕೆಲಸ ಮಾಡುವ ವಿಧಾನ ಬದಲಿಸಿಕೊಳ್ಳಬೇಕು ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಶುಕ್ರವಾರ ಹೇಳಿದರು.

ಪ್ರಕರಣವನ್ನು ಮುಂದೂಡುವಂತೆ ವಕೀಲರೊಬ್ಬರು ಕೇಳಿಕೊಂಡಾಗ “ನೀವು ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡುವ ಶೈಲಿಯನ್ನು ಬದಲಿಸಿಕೊಳ್ಳಬೇಕು. ನ್ಯಾಯಮೂರ್ತಿಗಳು ಸಂಕ್ಷಿಪ್ತ ಮಾಹಿತಿಯನ್ನು ಓದಿದ ಬಳಿಕ ವಕೀಲರು ವಾದ ಮಂಡಿಸುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವುದಿಲ್ಲ ಎಂದು ವಕೀಲರು ದೂರುತ್ತಾರೆ. ಆದರೆ ಅವರ ಪ್ರಕರಣಗಳು ವಿಚಾರಣೆಗೆ ಬಂದಾಗ ಮುಂದೂಡುವಂತೆ ಕೋರುತ್ತಾರೆ. ಕೋವಿಡ್‌ ಅಥವಾ ಕೌಟುಂಬಿಕ ಸಾವಿನ ಕಾರಣಗಳಿದ್ದರೆ ಮಾತ್ರ ವಕೀಲರು ಪ್ರಕರಣ ಮುಂದೂಡಲು ಕೋರಬಹುದು” ಎಂದು ಅವರು ಹೇಳಿದರು.

Kannada Bar & Bench
kannada.barandbench.com