ಬೇರೆ ಆ್ಯಪ್‌ಗಳ ಬೆಂಬಲವಿಲ್ಲದೆ ಕಲಾಪಗಳ ನೇರಪ್ರಸಾರ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌ಗೆ ರಿಜಿಸ್ಟ್ರಾರ್ ಮಾಹಿತಿ

ಮೂರನೆಯವರ ಮೂಲಸೌಕರ್ಯ ಅವಲಂಬಿಸದೆ ನೇರಪ್ರಸಾರಕ್ಕೆ ಇರುವ ಸಮಸ್ಯೆ ನಿವಾರಿಸಲು ನ್ಯಾಯಾಲಯ ಶ್ರಮಿಸುತ್ತಿದೆ ಎಂದು ಕೂಡ ಪೀಠಕ್ಕೆ ತಿಳಿಸಲಾಗಿದೆ.
Supreme Court, Live Streaming
Supreme Court, Live Streaming

ಮೂರನೆಯವರ ಅಪ್ಲೀಕೇಷನ್‌ಗಳ (ಥರ್ಡ್‌ ಪಾರ್ಟಿ ಆ್ಯಪ್‌) ಮೂಲಸೌಕರ್ಯ ಅವಲಂಬಿಸದೆ ಸುಪ್ರೀಂ ಕೋರ್ಟ್‌ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯಾಗಲಿ, ಮಾಹಿತಿ ಕೇಂದ್ರವಾಗಲಿ (ಎನ್‌ಐಸಿ) ಎರಡೂ ಪ್ರಸ್ತುತ ಮೂಲಸೌಕರ್ಯ ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಲಯದ  ಪ್ರಧಾನ ಕಾರ್ಯದರ್ಶಿ  ಅವರು ನ್ಯಾಯಲಾಯಕ್ಕೆ ತಿಳಿಸಿದ್ದಾರೆ [ಕೆ ಎನ್ ಗೋವಿಂದಾಚಾರ್ಯ ಮತ್ತು ಸೆಕ್ರೆಟರಿ ಜನರಲ್‌ ನಡುವಣ ಪ್ರಕರಣ].

ದೊಡ್ಡಮಟ್ಟದ ವೀಕ್ಷಕರಿಗೆ ನೇರ ಪ್ರಸಾರ ಸೇವೆ ಒದಗಿಸಲು ಬೇರೆ ಅಪ್ಲಿಕೇಷನ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಫಿಡವಿಟ್ ಸಲ್ಲಿಸಿದ್ದಾರೆ.

ನೇರಪ್ರಸಾರ ಮಾಡಿದ ನ್ಯಾಯಾಲಯ ಕಲಾಪಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ಹಕ್ಕುಸ್ವಾಮ್ಯ ರಕ್ಷಿಸಬೇಕೆಂದು ಕೋರಿ  ಆರ್‌ಎಸ್‌ಎಸ್‌ನ ಮಾಜಿ ಚಿಂತಕ ಕೆ ಎನ್‌ ಗೋವಿಂದಾಚಾರ್ಯ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಲೈವ್-ಸ್ಟ್ರೀಮಿಂಗ್ ಮತ್ತು ಆರ್ಕೈವ್ ಮಾಡಿದ ನ್ಯಾಯಾಂಗ ಪ್ರಕ್ರಿಯೆಗಳ ಮೇಲಿನ ಹಕ್ಕುಸ್ವಾಮ್ಯವನ್ನು ರಕ್ಷಿಸಲು ಯೂಟ್ಯೂಬ್‌ನೊಂದಿಗೆ ವಿಶೇಷ ಒಪ್ಪಂದ ಮಾಡಿಕೊಳ್ಳುವಂತೆ ಮನವಿಯಲ್ಲಿ ಪ್ರಾರ್ಥಿಸಲಾಗಿತ್ತು.

ಅಫಿಡವಿಟ್‌ನಲ್ಲಿ ಏನಿದೆ?

  • ಬೇರೆ ಅಪ್ಲಿಕೇಷನ್‌ಗಳನ್ನು ಅವಲಂಬಿಸದೆ ನೇರ ಪ್ರಸಾರ ಮಾಡುವಂತಹ ಸಾಕಷ್ಟು ತಾಂತ್ರಿಕ ಮತ್ತು ಮೂಲ ಸೌಕರ್ಯಗಳು  ರಿಜಿಸ್ಟ್ರಿ ಮಾತ್ರವಲ್ಲದೆ ಎನ್‌ಐಸಿ ಬಳಿ ಕೂಡ ಇಲ್ಲ. ದೊಡ್ಡಮಟ್ಟದ ವೀಕ್ಷಕರಿಗೆ ನೇರ ಪ್ರಸಾರ ಸೇವೆ ಒದಗಿಸಲು  ಬೇರೆ ಅಪ್ಲಿಕೇಷನ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ

  • ಮೂರನೆಯವರ ಮೂಲಸೌಕರ್ಯ ಅವಲಂಬಿಸದೆ  ನೇರಪ್ರಸಾರಕ್ಕೆ ಇರುವ ಸಮಸ್ಯೆ ನಿವಾರಿಸಲು ನ್ಯಾಯಾಲಯ ಶ್ರಮಿಸುತ್ತಿದೆ

  • ಮುಕ್ತ ನ್ಯಾಯಾಲಯಗಳ ತತ್ವವ  ಎತ್ತಿಹಿಡಿಯಲು ಸ್ವಪ್ನಿಲ್ ತ್ರಿಪಾಠಿ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಕರಣದಲ್ಲಿ  ನೀಡಿದ ನಿರ್ದೇಶನಗಳನ್ನು ಪಾಲಿಸಬೇಕಿರುವುದರಿಂದ ಬೇರೆಯವರು ಒದಗಿಸುವ ಸೌಲಭ್ಯಗಳನ್ನು ಪಡೆಯಲು ರಿಜಿಸ್ಟ್ರಿಗೆ ಅಡೆತಡೆಗಳಿವೆ.

  • ಸ್ವ-ಸುಸ್ಥಿರ, ಸ್ವಯಂಪೂರ್ಣ ಹಾಗೂ ಸ್ವಾವಲಂಬಿ ನೇರ ಪ್ರಸಾರ ವೇದಿಕೆಯೊಂದನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಕರಣದ ಒಂದನೇ ಪ್ರತಿವಾದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಪ್ರಸ್ತುತ ಹೇಗೆ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗುತ್ತಿದೆ ಎಂಬ ವಿವರಗಳು ಕೂಡ ಅಫಿಡವಿಟ್‌ನಲ್ಲಿವೆ. ಹಿಂದಿನ ವಿಚಾರಣೆ ವೇಳೆ ಅರ್ಜಿದಾರ ಗೋವಿಂದಾಚಾರ್ಯ ಅವರ ಪರ ವಕೀಲರು ಸಂವಿಧಾನದ 145ನೇ ವಿಧಿಯ ಪ್ರಕಾರ ನಿಯಮಾವಳಿ ಬದಲಿಸಬೇಕಿದ್ದು ಹಕ್ಕುಸ್ವಾಮ್ಯ ಒಪ್ಪಿಸಬಾರದು ಎಂದಿದ್ದರು.

ಇದಕ್ಕೆ ಉತ್ತರಿಸಿದ್ದ ಪೀಠ, ನಾವು ಅಡೆತಡೆಗಳನ್ನು ದಾಟಬೇಕಿತ್ತು ಹೀಗಾಗಿ ನಿಯಮಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ನೀವೆಲ್ಲಾ ನೋಡಿದಂತೆ ನಾವಿಟ್ಟಿರುವ ಹೆಜ್ಜೆಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ ಎಂದಿತ್ತು.

"ಇತ್ತೀಚೆಗೆ ಈ ನ್ಯಾಯಾಲಯದ ಪೂರ್ಣಪೀಠವು ಸಂವಿಧಾನ ಪೀಠದ ಪ್ರಕರಣಗಳನ್ನು ನೇರ ಪ್ರಸಾರ ಮಾಡಲು ನಿರ್ಧಾರಿಸಿತು. ಸಂವಿಧಾನ ಪೀಠದ ಕಲಾಪ ನೇರ ಪ್ರಸಾರ ಮಾಡಿದ ಅನುಭವವನ್ನು ಆಧರಿಸಿ ನೇರ ಪ್ರಸಾರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ನಿರ್ಧರಿಸಲಾಗಿತ್ತು" ಎಂದು ಅದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com