ದೆಹಲಿ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದ ಸುಪ್ರೀಂ: 24 ಗಂಟೆಗಳಲ್ಲಿ ಚುನಾವಣೆಗೆ ತಾಕೀತು

ಮೇಯರ್ ಆಯ್ಕೆಯಾದ ನಂತರ ಉಪಮೇಯರ್ ಆಯ್ಕೆ ಮಾಡುವುದಕ್ಕೆ ಮೇಯರ್ ಅವರೇ ಸಭಾಧ್ಯಕ್ಷರಾಗಬೇಕು ಎಂದು ಆದೇಶಿಸಿದೆ ನ್ಯಾಯಾಲಯ.
SupremeCourt and Delhi MCD, AAP
SupremeCourt and Delhi MCD, AAP
Published on

ದೆಹಲಿ ಮಹಾನಗರ ಪಾಲಿಕೆಯಾದ ಎಂಸಿಡಿಗೆ ಮೇಯರ್‌ ಆಯ್ಕೆ ಮಾಡಲು 24 ಗಂಟೆಗಳ ಒಳಗೆ ಚುನಾವಣಾ ದಿನಾಂಕ ಘೋಷಿಸುವಂತೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ [ಶೆಲ್ಲಿ ಒಬೆರಾಯ್‌ ಮತ್ತಿತರರು ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಹಾಗೂ ಇನ್ನಿತರರ ನಡುವಣ ಪ್ರಕರಣ].

ಅಲ್ಲದೆ ಪಾಲಿಕೆಗೆ ಲೆಫ್ಟಿನೆಂಟ್‌ ಗವರ್ನರ್‌ ನಾಮನಿರ್ದೇಶನ ಮಾಡಿದ ಸದಸ್ಯರು ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

Also Read
ದೆಹಲಿ ಮೇಯರ್ ಚುನಾವಣೆ: ನಾಮ ನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್‌

ಪೀಠ ನೀಡಿದ ನಿರ್ದೇಶನಗಳು ಇಂತಿವೆ:

  • ಎಂಸಿಡಿ ಮೊದಲ ಸಭೆ ನಡೆಸಿ ಮೇಯರ್‌ ಅವರನ್ನು ಆಯ್ಕೆ ಮಾಡಬೇಕಿದೆ. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.

  • ಮೇಯರ್ ಚುನಾಯಿತರಾದ ನಂತರ, ಅವರು ಉಪ ಮೇಯರ್‌ ಆಯ್ಕೆ ಮಾಡಲು ಅಧ್ಯಕ್ಷತೆ ವಹಿಸಿಕೊಳ್ಳಬೇಕು.

  • ಎಂಸಿಡಿ ಮೊದಲ ಸಭೆ ನಡೆಸುವುದಕ್ಕೆ ಹಾಗೂ ಮೇಯರ್ ಚುನಾವಣೆಗೆ 24 ಗಂಟೆಗಳ ಒಳಗೆ ದಿನಾಂಕ ಘೋಷಿಸಿ, ಅಧಿಸೂಚನೆ ಹೊರಡಿಸತಕ್ಕದ್ದು. ಮೇಲ್ಕಂಡ ನಿರ್ದೇಶನದ ಪ್ರಕಾರ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸುವ ದಿನಾಂಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕು.

  • ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.

Also Read
ದೆಹಲಿ ಮೇಯರ್ ಚುನಾವಣೆ: ಎಲ್‌ಜಿ ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಆಪ್

ದೆಹಲಿ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟ ದೆಹಲಿ ಲೆಫ್ಟಿನೆಂಟ್-ಗವರ್ನರ್ ಕ್ರಮ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ನಾಯಕಿ ಶೆಲ್ಲಿ ಒಬೆರಾಯ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿಯೇ ಪಾಲಿಕೆ ಸದಸ್ಯರು ಚುನಾಯಿತರಾಗಿದ್ದರೂ ಈವರೆಗೆ ಮೇಯರ್‌ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ.

Kannada Bar & Bench
kannada.barandbench.com