ಇ-ಫೈಲ್‌ ಮಾಡಿದ ಒಟ್ಟು ಪ್ರಕರಣಗಳ ಸಂಖ್ಯೆ ಬಹಿರಂಗಪಡಿಸುವಂತೆ ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ಮತ್ತು ಜಿಲ್ಲಾ ಹಾಗೂ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್‌ ಮಾಡುವುದಕ್ಕೆ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ನ ಕಂಪ್ಯೂಟರ್‌ ವಿಭಾಗಕ್ಕೆ ಪೀಠ ನಿರ್ದೇಶನ ನೀಡಿದೆ.
ಇ-ಫೈಲ್‌ ಮಾಡಿದ ಒಟ್ಟು ಪ್ರಕರಣಗಳ ಸಂಖ್ಯೆ ಬಹಿರಂಗಪಡಿಸುವಂತೆ ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ
Karnataka high court with lawyers

ವರ್ಷದ ಹಿಂದೆಯೇ ಇ-ಫೈಲಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಹೆಚ್ಚಿನ ಸಂಖ್ಯೆ ವಕೀಲರು ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಇ-ಫೈಲಿಂಗ್‌ ವ್ಯವಸ್ಥೆ ಕೋರಿ ವಕೀಲ ದಿಲ್‌ರಾಜ್‌ ರೋಹಿತ್‌ ಸೀಕ್ವೈರಾ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಸೂರಜ್‌ ಗೋವಿಂದರಾಜ್‌ ನಡೆಸಿತು. ಹೈಕೋರ್ಟ್‌ ಮತ್ತು ಜಿಲ್ಲಾ ಹಾಗೂ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್‌ ಮಾಡುವುದಕ್ಕೆ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ನ ಕಂಪ್ಯೂಟರ್‌ ವಿಭಾಗಕ್ಕೆ ಪೀಠ ನಿರ್ದೇಶನ ನೀಡಿದೆ.

ಇದುವರೆಗೆ ಇ-ಫೈಲಿಂಗ್‌ ಮಾಡಿರುವ ದತ್ತಾಂಶವನ್ನು ವರದಿಯಲ್ಲಿ ಉಲ್ಲೇಖಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ ಮನವಿ ಸಲ್ಲಿಸಿದ್ದೀರಾ ಎಂದು ಅರ್ಜಿದಾರ ವಕೀಲರನ್ನು ಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರ ವಕೀಲರು ಇ-ಫೈಲಿಂಗ್‌ ವ್ಯವಸ್ಥೆ ಬಳಸುತ್ತಿಲ್ಲ. ರಿಜಿಸ್ಟ್ರಿಗೆ ಇಮೇಲ್‌ ಕಳುಹಿಸುವ ಪರಂಪರೆಯನ್ನೇ ಮುಂದುವರೆಸಿರುವುದಾಗಿ ಒಪ್ಪಿಕೊಂಡರು.

Also Read
ಜನಸಾಮಾನ್ಯರಲ್ಲಿ ಜಾಲ ಕಲಾಪ, ಇ- ಫೈಲಿಂಗ್‌ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಬೇಕಿದೆ: ನ್ಯಾ. ಶ್ರೀಮತಿ ಕಾವೇರಿ

ಆಗ ನ್ಯಾಯಾಲಯವು “ಇ-ಫೈಲಿಂಗ್‌ ವ್ಯವಸ್ಥೆ ಕೋರಿ ನೀವು ಮನವಿ ಸಲ್ಲಿಸಿದ್ದೀರಿ. ಆದರೆ, ಇ-ಫೈಲಿಂಗ್‌ ಪೋರ್ಟಲ್‌ ಆರಂಭಿಸಲಾಗಿದೆ ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿತು. ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಪೀಠವು “ಬಾಕಿ ಇರುವ ಪ್ರಕರಣಗಳನ್ನು ಸ್ಕ್ಯಾನ್‌ ಮಾಡದಿದ್ದರೆ ಇ-ಫೈಲಿಂಗ್‌ ವ್ಯವಸ್ಥೆ ಯಶಸ್ವಿಯಾಗುವುದಿಲ್ಲ. ಪ್ರತಿಯೊಂದು ಫೈಲ್‌ನ ಪ್ರತಿಗಳನ್ನು ಪ್ರತ್ಯೇಕಗೊಳಿಸಿ ಸ್ಕ್ಯಾನ್‌ ಮಾಡಬೇಕಿದ್ದು, ಇದು ಅತ್ಯಂತ ನಿಧಾನಗತಿಯ ಪ್ರಕ್ರಿಯೆಯಾಗಿದೆ. ಸ್ಕ್ಯಾನಿಂಗ್‌ ಪ್ರಕ್ರಿಯೆ ನಡೆಸಲು ಕಂಪ್ಯೂಟರ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ, ಹಣಕಾಸು ಮತ್ತು ಮಾನವ ಸಂಪನ್ಮೂಲದ ಅಗತ್ಯವಿದೆ. ಇದಕ್ಕಾಗಿ ಸರ್ವರ್‌ಗಳನ್ನು ಅಪ್ಡೇ‌ಟ್‌ ಮಾಡಬೇಕಿದೆ. ಇ-ಫೈಲಿಂಗ್‌ ಜಾರಿಗೊಳಿಸಲು ಸ್ಕ್ಯಾನಿಂಗ್‌ ಮಾಡಲು ಹೆಚ್ಚಿನ ಸ್ಥಳಾವಕಾಶ, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಬೇಕಿದೆ” ಎಂದಿತ್ತು.

Related Stories

No stories found.