[ನಗ್ನ ಫೋಟೋಶೂಟ್] ಅಶ್ಲೀಲತೆ, ಮಹಿಳೆಯರ ಘನತೆಗೆ ಕುತ್ತು ತಂದ ಆರೋಪದಡಿ ನಟ ರಣವೀರ್ ವಿರುದ್ಧ ಮುಂಬೈ ಪೊಲೀಸರ ಎಫ್ಐಆರ್

ಇಂತಹ ಕೃತ್ಯಗಳನ್ನು ಕಠಿಣವಾಗಿ ವಿರೋಧಿಸಬೇಕಿದೆ. ಒಂದೊಮ್ಮೆ ಹಾಗೆ ಮಾಡದೆ ಹೋದಲ್ಲಿ ಯಶಸ್ಸಿಗಾಗಿ ಇನ್ನೂ ಶ್ರಮಿಸುತ್ತಿರುವ ಕಲಾವಿದರು ಕೀಳು ಪ್ರಚಾರಕ್ಕಾಗಿ ಇದೇ ಹಾದಿಯನ್ನು ಹಿಡಿಯುತ್ತಾರೆ ಎಂದು ದೂರಿನಲ್ಲಿ ಆರೋಪ.
Ranveer Singh
Ranveer Singh Facebook

ಇ- ಮ್ಯಾಗಜಿನ್‌ ಒಂದರಲ್ಲಿ ಪ್ರಕಟವಾಗಿದ್ದ ತಮ್ಮ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರುಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ರಣವೀರ್‌ ವಿರುದ್ಧ ಐಪಿಸಿ ಸೆಕ್ಷನ್‌ 292 (ಅಶ್ಲೀಲ ಪುಸ್ತಕಗಳ ಮಾರಾಟ, ಇತ್ಯಾದಿ), 294 (ಅಶ್ಲೀಲ ಕ್ರಿಯೆ ಮತ್ತು ಹಾಡುಗಳು) ಮತ್ತು 509ರ (ಮಹಿಳೆಯರ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ ಬಳಕೆ) ಅಡಿ ಪ್ರಕರಣ ದಾಖಲಿಸಲಾಗಿದೆ.

Also Read
ಐಟಿ ಕಾಯಿದೆಯ ʼಲೈಂಗಿಕವಾಗಿ ಸಾಬೀತುʼ ಎಂಬ ಪದ ಸಂಭೋಗಕ್ಕಷ್ಟೇ ಸೀಮಿತವಲ್ಲ, ನಗ್ನ ವೀಡಿಯೊಗೂ ಅನ್ವಯ: ಬಾಂಬೆ ಹೈಕೋರ್ಟ್

ಐವತ್ತು ವರ್ಷದ ಮುಂಬೈ ನಿವಾಸಿ ಲಲಿತ್ ತೇಕ್‌ಚಂದಾನಿ ನೀಡಿದ ದೂರನ್ನು ಆಧರಿಸಿ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭಾರತದಂತಹ ಸುಸಂಸ್ಕೃತ ದೇಶದಲ್ಲಿ ಈ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್‌ ಆಗಿವೆ ಎಂದು ಎಫ್‌ಐಆರ್‌ನಲ್ಲಿ ಅವರು ದಾಖಲಿಸಿದ್ದಾರೆ.

"ಭಾರತದಲ್ಲಿ ಕಲಾವಿದರನ್ನು ನಾಯಕರು ಎಂದೇ ಕರೆಯಲಾಗುತ್ತದೆ. ಜನ ಅವರನ್ನು ಅನುಸರಿಸುತ್ತಾರೆ. ದೇಶದ ಕೆಲವು ಭಾಗಗಳಲ್ಲಿ ಅವರನ್ನು ದೇವರೆಂದೂ ಪೂಜಿಸುತ್ತಾರೆ. ರಣವೀರ್ ಸಿಂಗ್‌ನಂತಹ ನಟರು ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಜನರ ಭಾವನೆಗಳನ್ನು ಬಳಸಿಕೊಂಡು ಕೀಳು ಪ್ರಚಾರ ಪಡೆಯಲು ಮುಂದಾಗುತ್ತಾರೆ. ಇಂತಹ ಕೃತ್ಯಗಳನ್ನು ಕಠಿಣವಾಗಿ ವಿರೋಧಿಸಬೇಕಿದೆ. ಒಂದೊಮ್ಮೆ ಹಾಗೆ ಮಾಡದೆ ಹೋದಲ್ಲಿ ಯಶಸ್ಸಿಗಾಗಿ ಇನ್ನೂ ಶ್ರಮಿಸುತ್ತಿರುವ ಕಲಾವಿದರು ಕೀಳು ಪ್ರಚಾರಕ್ಕಾಗಿ ಇದೇ ಹಾದಿಯನ್ನು ಹಿಡಿಯುತ್ತಾರೆ. ಇದು ಕಡುಕೆಟ್ಟ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ," ಎಂದು ದೂರಿನಲ್ಲಿ ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com