'ನ್ಯಾಯʼ ಸಂಸ್ಥೆಯಿಂದ ಸಂವಿಧಾನ ಫೆಲೋಶಿಪ್‌ಗೆ ವಕೀಲರಿಂದ ಅರ್ಜಿ ಆಹ್ವಾನ; ಏಪ್ರಿಲ್‌ 10ರ ಗಡುವು

'ನ್ಯಾಯʼ ಸಂಸ್ಥೆಯಿಂದ ಸಂವಿಧಾನ ಫೆಲೋಶಿಪ್‌ಗೆ ವಕೀಲರಿಂದ ಅರ್ಜಿ ಆಹ್ವಾನ; ಏಪ್ರಿಲ್‌ 10ರ ಗಡುವು

ಎಂಟು ವಕೀಲರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಿದ್ದು, ರೋಲಿಂಗ್‌ ಆಧಾರದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Published on

ಜನರಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ʼನ್ಯಾಯʼ ಸಂಸ್ಥೆಯು 2024-25ನೇ ಸಾಲಿನ ಸಂವಿಧಾನ ಫೆಲೋಶಿಪ್‌ ಆರಂಭಿಸಿದ್ದು, ಅರ್ಹ ವಕೀಲರು ಏಪ್ರಿಲ್‌ 10ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎಂಟು ವಕೀಲರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಿದ್ದು, ರೋಲಿಂಗ್‌ ಆಧಾರದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಾವೆ ವಿಭಾಗದಲ್ಲಿ ಮೂರು ವರ್ಷ ಅನುಭವ ಹೊಂದಿರುವ, ಕನ್ನಡದಲ್ಲಿ ಸರಾಗವಾಗಿ ಮಾತನಾಡಬಲ್ಲ, ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಮತ್ತು ತಳಮಟ್ಟದ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವ ವಕೀಲರು ಅರ್ಜಿ ಸಲ್ಲಿಸಬಹುದಾಗಿದೆ.

ಕಾರ್ಮಿಕರು, ಮಹಿಳೆಯರು, ಮಕ್ಕಳು, ಅಂಗವಿಕಲರು ಮತ್ತು ಹಿಂದುಳಿದ ಸಮುದಾಯಗಳ ಹಕ್ಕುಗಳು ಹಾಗೂ ಸಾಮಾಜಿಕ ಯೋಜನೆಗಳು ಮತ್ತು ಹಕ್ಕುಗಳ ಬಗ್ಗೆ ಜ್ಞಾನ ಅಗತ್ಯ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ https://kannada.nyaaya.org/access-to-justice-network/samvidhaan-fellowship/ ಭೇಟಿ ನೀಡಬಹುದು.

Kannada Bar & Bench
kannada.barandbench.com