ಮಕ್ಕಳ ಸಾಕ್ಷ್ಯ ಪ್ರಭಾವಿತವಲ್ಲ ಎಂಬುದಷ್ಟೇ ವಿಚಾರಣೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆ: ದೆಹಲಿ ಹೈಕೋರ್ಟ್ [ಚುಟುಕು]

ಮಕ್ಕಳ ಸಾಕ್ಷ್ಯ ಪ್ರಭಾವಿತವಲ್ಲ ಎಂಬುದಷ್ಟೇ ವಿಚಾರಣೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆ: ದೆಹಲಿ ಹೈಕೋರ್ಟ್ [ಚುಟುಕು]

ಗಾಯಗೊಂಡ ಮಗುವನ್ನು ಸಾಕ್ಷ್ಯವಾಗಿ ಪರಿಗಣಿಸುವಾಗ ಆ ಮಗುವಿಗೆ ಸಾಕ್ಷ್ಯ ಹೇಳುವಂತೆ ಯಾರೂ ಬೋಧನೆ ಮಾಡಿಲ್ಲ ಅಥವಾ ಪ್ರಭಾವಿಸಿಲ್ಲ ಮತ್ತು ಈ ಸಾಕ್ಷ್ಯ ಸಾಕಷ್ಟು ದೃಢೀಕೃತ ಎಂಬ ಬಗ್ಗೆ ಮಾತ್ರವೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿಶ್ವಾಸಾರ್ಹ ಎಂದು ಕಂಡುಬಂದಾಗಲೂ ಮಕ್ಕಳ ಸಾಕ್ಷ್ಯವನ್ನು ತಿರಸ್ಕರಿಸುವುದು ನ್ಯಾಯಸಮ್ಮತವಲ್ಲ. ಜೊತೆಗೆ ಭಾರತೀಯ ಸಾಕ್ಷ್ಯ ಅಧಿನಿಯಮವು ಸಾಕ್ಷಿಯ ಸಾಮರ್ಥ್ಯವನ್ನು ಪರೀಕ್ಷಿಸಲು ಯಾವುದೇ ಕನಿಷ್ಠ ಅಥವಾ ಗರಿಷ್ಠ ವಯಸ್ಸನ್ನು ಸೂಚಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನುಪ್ ಜೈರಾಮ್ ಭಂಭಾನಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com