ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು 7 ವರ್ಷಗಳ ನಿರಂತರ ಅಭ್ಯಾಸ ಕಡ್ಡಾಯ: ಅಲಾಹಾಬಾದ್ ಹೈಕೋರ್ಟ್ [ಚುಟುಕು]

ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು 7 ವರ್ಷಗಳ ನಿರಂತರ ಅಭ್ಯಾಸ ಕಡ್ಡಾಯ: ಅಲಾಹಾಬಾದ್ ಹೈಕೋರ್ಟ್ [ಚುಟುಕು]
ramesh sogemane
Published on

ಸಂವಿಧಾನದ 233 (2) ನೇ ವಿಧಿಯಡಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ತಡೆ ಇಲ್ಲದೆ 7 ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡುವುದು ಅವಶ್ಯಕ ಎಂದು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. 2019ರಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಉತ್ತರ ಪ್ರದೇಶ ರಾಜ್ಯದ ಉನ್ನತ ನ್ಯಾಯಾಂಗ ಸೇವೆಯಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಳ್ಳಲು ಬಯಸಿ ಅರ್ಜಿದಾರೆ ಬಿಂದು ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿದಾರರು ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಅರ್ಜಿ ಭರ್ತಿ ಮಾಡಿದ ದಿನಕ್ಕೆ ಅನ್ವಯವಾಗುವಂತೆ ಅರ್ಜಿದಾರೆ ವಕಿಲರಾಗಿ ಏಳು ವರ್ಷಗಳ ಕಾಲ ನಿರಂತರ ಪ್ರಾಕ್ಟಿಸ್‌ ಮಾಡಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಲಿಲ್ಲ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com