ಡ್ಯಾನ್ಸ್‌ ಬಾರ್ ಪರವಾನಗಿ: ಸ್ತ್ರೀ ಪರ ಕೆಲಸದ ವಾತಾವರಣ ಸೃಷ್ಟಿಸುವುದು ಸರ್ಕಾರದ ಕರ್ತವ್ಯ ಎಂದ ಸುಪ್ರೀಂ [ಚುಟುಕು]

Justices KM Joseph, Ravindra Bhat and SC

Justices KM Joseph, Ravindra Bhat and SC

Published on

ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯು ಆತಂಕಕಾರಿಯಾಗಿರುವ ಸಂದರ್ಭಗಳಲ್ಲಿ, ಅವರ ಆಯ್ಕೆಯನ್ನು ತಡೆಯುವ ಮತ್ತು ನಿಗ್ರಹಿಸುವ ಬದಲು ಅವರ ಉದ್ಯೋಗಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವುದು ಸರ್ಕಾರದ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಆ ಮೂಲಕ ಆರ್ಕೆಸ್ಟ್ರಾ ಬಾರ್‌ಗಳಲ್ಲಿ (ಡ್ಯಾನ್ಸ್‌ ಬಾರ್‌) ಕೆಲಸ ಮಾಡುವ ಕಲಾವಿದರ ಮೇಲೆ ಮುಂಬೈ ಪೊಲೀಸ್‌ ಆಯುಕ್ತರು ವಿಧಿಸಿದ್ದ ಲಿಂಗಮಿತಿ ಷರತ್ತನ್ನು ಅದು ಅನೂರ್ಜಿತಗೊಳಿಸಿದೆ.

ಕೇವಲ ನಾಲ್ವರು ಮಹಿಳಾ ಕಲಾವಿದರು ಮತ್ತು ನಾಲ್ಕು ಪುರುಷ ಕಲಾವಿದರು (ಒಟ್ಟು 8 ಕಲಾವಿದರು) ವೇದಿಕೆಯಲ್ಲಿ ಇರಲು ಅವಕಾಶವಿದ್ದರೆ ಮಾತ್ರ ಆರ್ಕೆಸ್ಟ್ರಾ ಬಾರ್‌ಗಳಿಗೆ ಪರವಾನಗಿ ನೀಡಲಾಗುವುದು ಎಂದು ಪೊಲೀಸ್‌ ಆಯುಕ್ತರು ಈ ಹಿಂದೆ ಆದೇಶಿಸಿದ್ದರು. ಈ ಷರತ್ತನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ʼಹೋಟೆಲ್‌ ಪ್ರಿಯಾʼ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com